ವಿಮರ್ಶೆಗೆ ಗಂಭೀರ ಸ್ವರೂಪ ನೀಡಿದ ಗಿರಡ್ಡಿ

ಶನಿವಾರ, ಮೇ 25, 2019
28 °C
ಡಾ.ಸಿ.ಎನ್. ರಾಮಚಂದ್ರನ್ ಅಭಿಮತ

ವಿಮರ್ಶೆಗೆ ಗಂಭೀರ ಸ್ವರೂಪ ನೀಡಿದ ಗಿರಡ್ಡಿ

Published:
Updated:
Prajavani

ಬೆಂಗಳೂರು: ‘ವಿಮರ್ಶೆ ಎನ್ನುವುದು ಕೇವಲ ಕೃತಿಯ ಮೌಲ್ಯಮಾಪನ ಎನ್ನುವ ಕಾಲದಲ್ಲಿ ಈ ಪ್ರಕಾರಕ್ಕೆ ಗಂಭೀರ ಸ್ವರೂಪ ನೀಡಿದವರು ಗಿರಡ್ಡಿ ಗೋವಿಂದರಾಜು’ ಎಂದು ವಿಮರ್ಶಕ ಡಾ.ಸಿ.ಎನ್. ರಾಮಚಂದ್ರನ್ ಹೇಳಿದರು.

ಕೆಪಿಟಿಸಿಎಲ್ ಲೆಕ್ಕಾಧಿಕಾರಿಗಳ ಸಂಘ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಕನ್ನಡ ಸಾಹಿತ್ಯಕ್ಕೆ ಗಿರಡ್ಡಿ ಗೋವಿಂದರಾಜು ಅವರ ಕೊಡುಗೆ’ ವಿಷಯದ ಕುರಿತು ಮಾತನಾಡಿದರು. 

‘ಬಹುಮುಖ ವ್ಯಕ್ತಿತ್ವದ ವಿಮರ್ಶಕ ಗಿರಡ್ಡಿ ಅವರು ಕಥೆ, ಕಾವ್ಯ ಸೇರಿದಂತೆ ಸಾಹಿತ್ಯದ ವಿವಿಧ ಕ್ಷೇತ್ರದಲ್ಲಿ ಕೃಷಿ ಮಾಡಿದ್ದಾರೆ. ನವ್ಯದ ಕಾಲದಲ್ಲಿ ಗಂಭೀರ ಸಾಹಿತ್ಯ ಇರದಿದ್ದರೂ ತಮ್ಮ ಬರವಣಿಗೆ ಚಾತುರ್ಯ ಮೂಲಕ ಅನೇಕ ಭಾವನೆಯನ್ನು ಕೃತಿಗಳಲ್ಲಿ ಹೊರಹಾಕುತ್ತಿದ್ದರು. ತಮ್ಮ ಕಾಲದ ಬಹುತೇಕ ಸಾಹಿತಿಗಳ ಕೃತಿಯನ್ನು ವಸ್ತುನಿಷ್ಠವಾಗಿ ವಿಮರ್ಶೆಗೆ ಒಳಪಡಿಸಿ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಅವಶ್ಯಕತೆಯನ್ನು ಹೆಕ್ಕಿ ತೆಗೆದಿದ್ದಾರೆ’ ಎಂದು ತಿಳಿಸಿದರು. 

‘ಬಹುತೇಕರು ವ್ಯವಸ್ಥೆಯ ಲೋಪದೋಷಗಳನ್ನು ಟೀಕಿಸುತ್ತಾ, ಸಮಸ್ಯೆಗಳನ್ನು ನಿವಾರಿಸಲು ಮಹಾಪುರುಷರ ಆಗಮನಕ್ಕೆ ಎದುರುನೋಡುತ್ತಾರೆ. ಆದರೆ, ತಾವೇ ಮಹಾಪುರುಷರಾಗಲು ಇಚ್ಛಿಸುವುದಿಲ್ಲ. ಈ ಸಂಗತಿಯನ್ನು ಗಿರಡ್ಡಿ ಅವರು ಕೂಡ ಉಲ್ಲೇಖಿಸಿದ್ದಾರೆ’ ಎಂದರು.

ಬಳಿಕ ಜಯಂತಿ ನಾಯ್ಕ್ ಮತ್ತು ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. 

‘ಗಿರಡ್ಡಿ ಅವರು ವಿಮರ್ಶೆಯಲ್ಲಿ ಪ್ರಧಾನವಾಗಿ ಜೀವನಮೌಲ್ಯಗಳನ್ನು ಹುಡುಕುತ್ತಿದ್ದರು. ಹೀಗಾಗಿಯೇ ಎಸ್‌.ಎಲ್‌. ಭೈರಪ್ಪ ಅವರ ಕೆಲ ಕಾದಂಬರಿಗಳು ಜೀವ ವಿರೋಧಿ ಮೌಲ್ಯವನ್ನು ಹೊಂದಿವೆ ಎನ್ನುವುದನ್ನು ವಿಮರ್ಶೆಯಲ್ಲಿಯೇ ಉಲ್ಲೇಖಿಸಿದ್ದರು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !