ಪಿಎಸ್‌ಐ ಪತ್ನಿಯ ಚಿನ್ನ ಕಳವು

7

ಪಿಎಸ್‌ಐ ಪತ್ನಿಯ ಚಿನ್ನ ಕಳವು

Published:
Updated:

ಬೆಂಗಳೂರು: ಬನಶಂಕರಿ ದೇವಸ್ಥಾನದ ಆವರಣದಲ್ಲಿ ಕಳವಾದ ಪಿಎಸ್‌ಐ ಪತ್ನಿಯ ಪರ್ಸ್, ಸ್ವಲ್ಪ ಸಮಯದಲ್ಲೇ ಅಲ್ಲಿನ ಶೌಚಗೃಹದಲ್ಲೇ ಮಹಿಳೆಯೊಬ್ಬರಿಗೆ ಸಿಕ್ಕಿದೆ. ಆದರೆ, ಅದರಲ್ಲಿದ್ದ 40 ಗ್ರಾಂನ ಚಿನ್ನಾಭರಣ ನಾಪತ್ತೆಯಾಗಿದೆ.

ವಿ.ವಿ.ಪುರಂ ಸಂಚಾರ ಠಾಣೆಯ ಪಿಎಸ್‌ಐ ಡಿ. ರಮೇಶ್ ಅವರ ಪತ್ನಿ ಗೀತಾ, ದೇವಸ್ಥಾನಕ್ಕೆ ತೆರಳಿದ್ದಾಗ ಈ ಘಟನೆ ನಡೆದಿತ್ತು. ಕೂಡಲೇ ಅವರು ಕುಮಾರಸ್ವಾಮಿ ಲೇಔಟ್ ಠಾಣೆಗೆ ವಿಷಯ ತಿಳಿಸಿದ್ದರು.

ಇದರ ಬೆನ್ನಲ್ಲೇ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರನ್ನು ಭೇಟಿಯಾದ ಮಹಿಳೆಯೊಬ್ಬರು, ‘ಶೌಚಗೃಹದಲ್ಲಿ ಪರ್ಸ್ ಹಾಗೂ ಆಧಾರ್ ಕಾರ್ಡ್ ಸಿಕ್ಕಿತು. ಇದನ್ನು ಸಂಬಂಧಪಟ್ಟವರಿಗೆ ತಲುಪಿಸಿಬಿಡಿ’ ಎಂದು ಅವುಗಳನ್ನು ಕೊಟ್ಟು ಹೊರಟು ಹೋಗಿದ್ದರು. ಆಡಳಿತ ಮಂಡಳಿಯವರು ಅವುಗಳನ್ನು ಪೊಲೀಸರ ಸುಪರ್ದಿಗೆ ಒಪ್ಪಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !