ಕಡಲೆಕಾಯಿ ಪರಿಷೆ ಆರಂಭ

7

ಕಡಲೆಕಾಯಿ ಪರಿಷೆ ಆರಂಭ

Published:
Updated:
Deccan Herald

ಬೆಂಗಳೂರು: ಯಲಹಂಕ ಸಮೀಪದ ವೆಂಕಟಾಲ ಗ್ರಾಮದಲ್ಲಿ ಅಭಯ ಮಹಾಗಣಪತಿ ದೇವಾಲಯದ 6ನೇ ವಾರ್ಷಿಕೋತ್ಸವದ ಅಂಗವಾಗಿ ಕಡಲೆಕಾಯಿ ಪರಿಷೆ ಶನಿವಾರ  ಆರಂಭವಾಯಿತು.

ಪರಿಷೆಯಲ್ಲಿ ದೇವನಹಳ್ಳಿ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ವಿಜಯಪುರ, ಹೊಸಕೋಟೆ, ಗೌರಿಬಿದನೂರು, ಯಲಹಂಕ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಕಡಲೇಕಾಯಿ ವ್ಯಾಪಾರಿಗಳು ಭಾಗವಹಿಸಿ, ನಾಟಿ, ಸಮ್ರಾಟ್, ಜೆಎಲ್ ಮತ್ತಿತರ ಜಾತಿಯ ಕಡಲೇಕಾಯಿಯನ್ನು ಪ್ರತಿ ಕೆಜಿಗೆ ₹50-60 ದರದಂತೆ ಮಾರಾಟ ಮಾಡಿದರು.

ಜನರು ಉತ್ಸಾಹದಿಂದ ಪರಿಷೆಯಲ್ಲಿ ಪಾಲ್ಗೊಂಡರು. ತಮಗಿಷ್ಟವಾದ ಹಸಿ ಮತ್ತು ಹುರಿದ ಕಡಲೆಕಾಯಿಯನ್ನು ಖರೀದಿಸಿದರು. ಇದರ ಜೊತೆಗೆ ಮಕ್ಕಳ ಆಟಿಕೆಗಳು, ತಿಂಡಿ-ತಿನಿಸುಗಳು, ಕಬ್ಬಿನ ಜಲ್ಲೆ, ಹಣ್ಣುಗಳು, ಮಣ್ಣಿನ ಮತ್ತು ಪಿಒಪಿ ಬೊಂಬೆಗಳು, ಗೃಹೋಪಯೋಗಿ ಮತ್ತು ಹೆಣ್ಣುಮಕ್ಕಳ ಅಲಂಕಾರಿಕ ಆಭರಣಗಳ ಮಾರಾಟದ ಭರಾಟೆಯೂ ಜೋರಾಗಿ ನಡೆದಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !