ಅವಕಾಶಗಳನ್ನು ಬಳಸಿಕೊಳ್ಳಿ: ಶೃತಿ ಕೊರ್ಲಹಳ್ಳಿ

7
ಜಿಎಸ್‌ಟಿ ಕಾರ್ಯಾಗಾರ

ಅವಕಾಶಗಳನ್ನು ಬಳಸಿಕೊಳ್ಳಿ: ಶೃತಿ ಕೊರ್ಲಹಳ್ಳಿ

Published:
Updated:

ಹುಬ್ಬಳ್ಳಿ: ಜಿಎಸ್‌ಟಿ ಜಾರಿಯ ನಂತರ ಲೆಕ್ಕಪರಿಶೋಧಕರಿಗೆ ಬೇಡಿಕೆ ಹೆಚ್ಚಾಗಿದ್ದು, ಈ ಅವಕಾಶವನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು ಎಂದು ಲೆಕ್ಕಪರಿಶೋಧಕಿ ಶೃತಿ ಕೊರ್ಲಹಳ್ಳಿ ಹೇಳಿದರು.

ಭಾರತೀಯ ಲೆಕ್ಕ ಪರಿಶೋಧಕರ ಸಂಘದ ಹುಬ್ಬಳ್ಳಿ ಶಾಖೆ ಲೆಕ್ಕಪರಿಶೋಧಕರ ದಿನಾಚರಣೆ ಅಂಗವಾಗಿ ವಿದ್ಯಾರ್ಥಿನಿಯರಿಗಾಗಿ ಭಾನುವಾರ ಏರ್ಪಡಿಸಿದ್ದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಜಿಎಸ್‌ಟಿ ದಿಢೀರ್ ಎಂದು ಜಾರಿಯಾದ ಕಾರಣ ಆರಂಭದಲ್ಲಿ ಗೊಂದಲವಾಯಿತು. ಅಲ್ಲದೆ 40 ದಿನಗಳ ಒಳಗೆ ರಿಟರ್ನ್ ಸಲ್ಲಿಸುವುದು ಕಡ್ಡಾಯವಾಗಿದ್ದರಿಂದ ತೊಂದರೆ ಆಯಿತು. ಸಣ್ಣ ವ್ಯಾಪಾರಿಯಿಂದ ಹಿಡಿದು ದೊಡ್ಡ ಉದ್ಯಮಿವರೆಗೂ ಜಿಎಸ್‌ಟಿ ಅನಿವಾರ್ಯ ಆಗಿರುವ ಕಾರಣ ಲೆಕ್ಕಪರಿಶೋಧಕರಿಗೆ ಅವಕಾಶಗಳು ಹೆಚ್ಚಾಗಿವೆ. ವಿದ್ಯಾರ್ಥಿಗಳು ಈಗಿನಿಂದಲೇ ಅದರ ಬಗ್ಗೆ ಮಾಹಿತಿ ಪಡೆಯುವ ಮೂಲಕ ಸನ್ನದ್ಧರಾಗಬೇಕು ಎಂದರು.

ವಿದ್ಯಾರ್ಥಿಗಳು ಹೊಸ ವಿಷಯಗಳನ್ನು ತಿಳಿದುಕೊಂಡಿರಬೇಕು ಎಂದು ಲೆಕ್ಕಪರಿಶೋಧಕಿ ಪದ್ಮಜ ಸಲಹೆ ನೀಡಿದರು. ಸಂಘದ ಕಾರ್ಯದರ್ಶಿ ಸುಭಾಷ್ ಪಾಟೀಲ್ ಮಾತನಾಡಿ, ಹುಬ್ಬಳ್ಳಿಯ ಎಲ್ಲ ಕಾಲೇಜುಗಳಿಗೆ ಕಾರ್ಯಾಗಾರದ ಆಹ್ವಾನ ಪತ್ರಿಕೆ ಕಳುಹಿಸಲಾಗಿತ್ತು. ಸುಮಾರು 35 ಮಂದಿ ಮಾತ್ರ ಬಂದಿದ್ದಾರೆ. ಇಲ್ಲಿ ಕಲಿತವರು ತಮ್ಮ ಸ್ನೇಹಿತರಿಗೂ ಮಾಹಿತಿ ನೀಡಿ ಎಂದು ಹೇಳಿದರು.

ಸಂಘದ ಅಧ್ಯಕ್ಷ ರಾಘವೇಂದ್ರ ಜೋಶಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಐದು ದಿನಗಳ ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿದೆ. ಒಟ್ಟು 20 ಗಂಟೆಗಳ ತರಬೇತಿ ನೀಡಲಾಗುವುದು ಎಂದರು.ವಿದ್ಯಾರ್ಥಿಗಳು ಪ್ರಾಯೋಗಿಕ ತಿಳಿವಳಿಕೆ ಬಗ್ಗೆ ಹೆಚ್ಚಿನ ಗಮನ ನೀಡಿದರೆ ಉಪಯೋಗವಾಗಲಿದೆ ಎಂದು ಸಂಘದ ವಿದ್ಯಾರ್ಥಿ ಘಟಕದ ಮುಖ್ಯಸ್ಥ ಕೃಷ್ಣಮೂರ್ತಿ ದೇಶಪಾಂಡೆ ಹೇಳಿದರು. ಕಾರ್ಯಕ್ರಮ ಸಂಯೋಜಕ ವಿನಯ ಕುಲಕರ್ಣಿ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !