ಮಂಗಳವಾರ, ನವೆಂಬರ್ 12, 2019
19 °C

‘ಗುರು ಶ್ರೇಷ್ಠ’ ಪ್ರಶಸ್ತಿ ಪ್ರದಾನ

Published:
Updated:
Prajavani

ಬೆಂಗಳೂರು: ಇಂಟರ್ ನಾಷನಲ್ ಸ್ಕೂಲ್ ಆಫ್ ಬಿಸಿನೆಸ್ ಆ್ಯಂಡ್‌ ರಿಸರ್ಚ್ ಸಂಸ್ಥೆಯ ವತಿಯಿಂದ ರಾಜ್ಯದ ಒಂಬತ್ತು ಬೋಧಕರಿಗೆ ‘ಗುರು ಶ್ರೇಷ್ಠ’ ಪ್ರಶಸ್ತಿ ಪ್ರದಾನ ಮಾಡಲಾಯಿತು. 

ಪ್ರಶಸ್ತಿ ಪುರಸ್ಕೃತರು: ಜೈನ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರಾಜದೀಪ್ ಮನ್ವಾನಿ, ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವೈ.ನಾಗರಾಜು, ನೃತ್ಯ ಗುರು ಸತ್ಯನಾರಾಯಣ ರಾಜು, ಅಥಣಿ ಸರ್ಕಾರಿ ಶಾಲೆಯ ವಿಶ್ವನಾಥ ಕಂಬಗಿ, ತೀರ್ಥಹಳ್ಳಿಯ ಶಿಕ್ಷಕ ರಾಘವೇಂದ್ರ ಭಟ್‌, ಧಾರವಾಡದ ಭೌತವಿಜ್ಞಾನ ಪ್ರಾಧ್ಯಾಪಕ ರಮೇಶ ಸುಗಾವಿ, ಬೆಂಗಳೂರಿನ ಶೈಕ್ಷಣಿಕ ಮತ್ತು ಸಾಮಾಜಿಕ ಅಧ್ಯಯನ ಕೇಂದ್ರದ ಡಾ. ಗೋವಿಂದ ರಾಜು, ಶಿವಮೊಗ್ಗ ಡಯಟ್‌ನ ಡಾ.ಹರಿಪ್ರಸಾದ, ಭಾರತೀಯ ಮನಶಾಸ್ತ್ರ ಸಂಸ್ಥೆಯ ಕಲ್ಪನಾ ಪುರುಷೋತ್ತಮ.

ಕಾರ್ಯಕ್ರಮದಲ್ಲಿ ವಾಸವಿ ವಿದ್ಯಾನಿಕೇತನ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಡಾ. ಶೇಷಮೂರ್ತಿ, ಎಲ್ಸಿಯಾ ಸಂಸ್ಥೆಯ ಅಧ್ಯಕ್ಷರಾದ ಎನ್. ಎಸ್. ರಮಾ, ಸೀಲ್ ಸಂಸ್ಥೆಯ ಸಂಸ್ಥಾಪಕರಾದ ಆದಿತ್ಯ ನಾರಾಯಣ ಮಿಶ್ರಾ, ಇಂಟರ್ ನಾಷನಲ್ ಸ್ಕೂಲ್ ಆಫ್ ಬಿಸಿನೆಸ್ ಆ್ಯಂಡ್‌ ರಿಸರ್ಚ್‍ನ ನಿರ್ದೇಶಕ ಡಾ. ಮಾನಸಾ ನಾಗಭೂಷಣ ಹಾಗೂ ಸಂಸ್ಥೆಯ ನಿರ್ವಾಹಕ ನಿರ್ದೇಶಕ ಮನೀಶ್ ಕೊಠಾರಿ ಹಾಜರಿದ್ದರು. 

ಪ್ರತಿಕ್ರಿಯಿಸಿ (+)