ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧಕರಿಗೆ ಹವ್ಯಕ ಪ್ರಶಸ್ತಿ ಪ್ರದಾನ

Last Updated 1 ಏಪ್ರಿಲ್ 2019, 20:04 IST
ಅಕ್ಷರ ಗಾತ್ರ

ಬೆಂಗಳೂರು: ‘ಎಲ್ಲರೂ ಮೊಬೈಲ್‌ ಮಾಯೆಗೆ ಸಿಲುಕಿದ ಪ್ರಸ್ತುತ ದಿನಮಾನಗಳಲ್ಲಿಯೂ ಯುವಜನರು ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಷಯ’ ಎಂದು ಲೇಖಕಿ ಎ.ಪಿ.ಮಾಲತಿ ಅಭಿಪ್ರಾಯಪಟ್ಟರು.

ಅಖಿಲ ಹವ್ಯಕ ಮಹಾಸಭಾಮಲ್ಲೇಶ್ವರದ ಹವ್ಯಕ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಂಸ್ಥಾಪನೋತ್ಸವ, ಹವ್ಯಕ ವಿಶೇಷ ಪ್ರಶಸ್ತಿ, ಪಲ್ಲವ ಪುರಸ್ಕಾರ ಪ್ರದಾ‌ನ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಹಾಸಭಾದ ಅಧ್ಯಕ್ಷ ಡಾ.ಗಿರಿಧರ ಕಜೆ,‘ನಮ್ಮಲ್ಲಿ ಅರ್ಜಿಯನ್ನು ಹಾಕಿ, ರಾಜಕೀಯ ಮಾಡಿ ಪ್ರಶಸ್ತಿ ಪಡೆಯುವ ಕ್ರಮ ಇಲ್ಲ. ಸಮಾಜದಿಂದ ನಾಮನಿರ್ದೇಶನ ಪಡೆದು, ಸಾಧಕರನ್ನು ಗುರುತಿಸಲಾಗುತ್ತಿದೆ’ ಎಂದು ತಿಳಿಸಿದರು.

‘ಮಹಾಸಭಾ ಸ್ಥಾಪನೆಯಾಗಿ 76 ವರ್ಷಗಳು ಪೂರ್ಣಗೊಂಡಿವೆ. ಸದಸ್ಯತ್ವವನ್ನು ಹೆಚ್ಚಿಸುವ ಕಡೆ ಹೆಚ್ಚಿನ ಗಮನವಹಿಸಲಾಗುವುದು’ ಎಂದು ತಿಳಿಸಿದರು.

ಪ್ರಶಸ್ತಿ ಪ್ರದಾನ

ಯಕ್ಷಗಾನ ಕಲಾವಿದ ಹೊನ್ನಾವರದ ನಾರಾಯಣ ಹಾಸ್ಯಗಾರ ಅವರಿಗೆ ಹವ್ಯಕ ವಿಭೂಷಣ ‍ಪ್ರಶಸ್ತಿ ಹಾಗೂಸಮಾಜ ಸೇವಕ ಕಾಸರಗೋಡಿನ ಗೋವಿಂದ ಭಟ್ ಮುಳ್ಳಂಕೊಚ್ಚಿ ಮತ್ತುಕೇಂದ್ರ ಮೀಸಲು ಶಸಸ್ತ್ರ ಪಡೆಯ ಐಜಿಪಿ (ಆರೋಗ್ಯ) ಸುಳ್ಯದ ಡಾ.ನಾರಾಯಣ್ ಭಟ್ ಅವರಿಗೆ ಹವ್ಯಕ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅನನ್ಯ ಭಾರ್ಗವ ಬೇದೂರು, ಸುಧಾ ಶರ್ಮಾ ಚವತ್ತಿ, ಶಾಂತಲಾ ಸುರೇಶ ಮುಂಗರವಳ್ಳಿ ಅವರಿಗೆ ಹವ್ಯಕ ಶ್ರೀ ಪ್ರಶಸ್ತಿ ನೀಡಲಾಯಿತು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹದಿನೈದು ಜನ ಯುವ ಸಾಧಕರಿಗೆ ಹವ್ಯಕ ಪಲ್ಲವ ಪುರಸ್ಕಾರ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT