ಭಾನುವಾರ, ಡಿಸೆಂಬರ್ 8, 2019
25 °C

ಹೆಡ್ ಕಾನ್‌ಸ್ಟೆಬಲ್ ಶ್ರೀನಿವಾಸ್‌ ನಿಧನ: ಮಿಡಿದ ಪೊಲೀಸರ ಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಕೆಲವು ದಿನಗಳ ಹಿಂದಷ್ಟೇ ನಿಧನರಾದ ಜ್ಞಾನಭಾರತಿ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಶ್ರೀನಿವಾಸ್‌ ಅವರ ಕುಟುಂಬಕ್ಕೆ, ಠಾಣೆಯ ಪೊಲೀಸರೇ ₹1 ಲಕ್ಷ ಸಂಗ್ರಹಿಸಿ ಕೊಟ್ಟಿದ್ದಾರೆ.

ಶ್ರೀನಿವಾಸ್‌, ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ಸಾವಿನಿಂದಾಗಿ ಕುಟುಂಬವು ಆರ್ಥಿಕ ತೊಂದರೆ ಅನುಭವಿಸುತ್ತಿತ್ತು. ಅವರ ಕಷ್ಟಕ್ಕೆ ಮಿಡಿದ ಪೊಲೀಸರು, ತಮ್ಮ ಸಹೋದ್ಯೋಗಿ ಕುಟುಂಬಕ್ಕೆ ನೆರವಾಗಲೆಂದು ಸ್ವಯಂಪ್ರೇರಿತರಾಗಿ ಹಣ ಸಂಗ್ರಹಿಸಿ ನೀಡಿದ್ದಾರೆ.

ಶ್ರೀನಿವಾಸ್‌ ಅವರ ಪತ್ನಿ ಹಾಗೂ ಮಗನನ್ನು ಮಂಗಳವಾರ ಠಾಣೆಗೆ ಆಹ್ವಾನಿಸಿದ್ದ ಪೊಲೀಸರು, ಅವರ ಕೈಗೆ ಹಣ ಕೊಟ್ಟಿದ್ದಾರೆ. ಅದನ್ನು ಸ್ವೀಕರಿಸಿದ ಪತ್ನಿ ಹಾಗೂ ಮಗ, ಪೊಲೀಸರಿಗೆ ಧನ್ಯವಾದ ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು