ವಿಶೇಷ ಕೋರ್ಟ್‌ನಲ್ಲಿ ಸಚಿವ ಹೆಗಡೆ

ಶನಿವಾರ, ಮಾರ್ಚ್ 23, 2019
34 °C

ವಿಶೇಷ ಕೋರ್ಟ್‌ನಲ್ಲಿ ಸಚಿವ ಹೆಗಡೆ

Published:
Updated:

ಬೆಂಗಳೂರು: ಭಟ್ಕಳ ಮತ್ತು ಅಜಂಗಡ ಭಯೋತ್ಪಾದಕರ ಉತ್ಪಾದನಾ ಕೇಂದ್ರ ಎಂದು ನೀಡಿದ್ದರೆನ್ನಲಾದ ಹೇಳಿಕೆ ಸಂಬಂಧ ಕೇಂದ್ರ ಕೌಶಲಾಭಿವೃದ್ದಿ ಮತ್ತು ಉದ್ಯಮಶೀಲತೆ ಇಲಾಖೆ ರಾಜ್ಯ ಸಚಿವ ಅನಂತ ಕಮಾರ್‌ ಹೆಗಡೆ ಗುರುವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದರು.

2016ರ ಫೆಬ್ರವರಿ ತಿಂಗಳಲ್ಲಿ ಶಿರಸಿಯಲ್ಲಿ  ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಮಯದಲ್ಲಿ ಅನಂತ್ ಕುಮಾರ್‌ ಹೆಗಡೆ, ಭಟ್ಕಳ ಮತ್ತು ಅಜಂಗಢ ಭಯೋತ್ಪಾದಕರ ಉತ್ಪಾದನಾ ಕೇಂದ್ರ ಎಂದಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಾಗಿತ್ತು.

ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ಸಂಬಂಧ ಗುರುವಾರ ತನಿಖಾಧಿಕಾರಿ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಸಚಿವರೂ ಕೋರ್ಟ್‌ ಹಾಲ್‌ನಲ್ಲಿ ಹಾಜರಿದ್ದರು. ವಿಚಾರಣೆಯನ್ನು ಮಾ.20ಕ್ಕೆ ಮುಂದೂಡಲಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !