ಸೋಮವಾರ, ಸೆಪ್ಟೆಂಬರ್ 16, 2019
29 °C

ಹೇಮರಡ್ಡಿ ಮಲ್ಲಮ್ಮ ಜಯಂತಿ: ಬೈಕ್ ರ‍್ಯಾಲಿ

Published:
Updated:
Prajavani

ಯಾದಗಿರಿ:  ಹೇಮರಡ್ಡಿ ಮಲ್ಲಮ್ಮಳ 597ನೇ ಜಯಂತ್ಯುತ್ಸವದ ಅಂಗವಾಗಿ ಶುಕ್ರವಾರ ನಗರದಲ್ಲಿ ವೀರಶೈವ ಲಿಂಗಾಯತ ರೆಡ್ಡಿ ಸಮುದಾಯದಿಂದ ಬೈಕ್ ರ‍್ಯಾಲಿ ನಡೆಯಿತು.

ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಹೇಮರೆಡ್ಡಿ ಮಲ್ಲಮ್ಮಳ ಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ನೂರಾರು ಬೈಕ್ ಗಳಲ್ಲಿ ಯುವಕರು ನಗರದ ತಹಶೀಲ್ದಾರ್ ಕಚೇರಿ, ಶಾಸ್ತ್ರಿ ಚೌಕ್, ಸುಭಾಷ್ ಚೌಕ್ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸಭಾಂಗಣದಲ್ಲಿ ನಡೆದ ಜಯಂತ್ಯುತ್ಸವದಲ್ಲಿ ಭಾಗವಹಿಸಿದರು.

ರ‍್ಯಾಲಿಯಲ್ಲಿ ಸಮಾಜದ ಹಿರಿಯ ಮುಖಂಡರಾದ ರಾಮರೆಡ್ಡಿಗೌಡ ಕ್ಯಾಸಪನಳ್ಳಿ, ರಾಚನಗೌಡ ಮುದ್ನಾಳ, ರಾಮರೆಡ್ಡಿಗೌಡ ತಂಗಡಗಿ, ಚಂದ್ರಶೇಖರಗೌಡ ಮಾಗನೂರ, ಸಿದ್ಧಲಿಂಗರೆಡ್ಡಿ ಉಳ್ಳೆಸೂಗುರ, ಶ್ರೀನಿವಾಸರೆಡ್ಡಿ ಪಾಟೀಲ ಚನ್ನೂರ, ಚಂದ್ರಾಯಗೌಡ ಗೋಗಿ, ಅಶೋಕರೆಡ್ಡಿ ಗೋನಾಲ, ಸದಾಶಿವಪ್ಪಗೌಡ ಪಾಟೀಲ ರೊಟ್ನಡಗಿ, ರಘುನಾಥರೆಡ್ಡಿ ನಜರಾಪುರ, ಭೀಮನಗೌಡ ಕ್ಯಾತನಾಳ, ಶ್ರೀನಿವಾಸರೆಡ್ಡಿ ಕಂದಕೂರ, ಬಸ್ಸುಗೌಡ ಬಿಳ್ಹಾರ, ಡಾ. ಸಿ.ಎಂ.ಪಾಟೀಲ, ಶಶಿಧರರೆಡ್ಡಿ ಹೊಸಳ್ಳಿ, ಪಂಪನಗೌಡ ತುನ್ನೂರ, ಡಾ. ಅಂಬ್ರಣ್ಣಗೌಡ ಗಡ್ಡೆಸೂಗುರ, ಡಾ. ಶರಣರೆಡ್ಡಿ ಕೋಡ್ಲಾ, ಡಾ. ಸಿದ್ಧರಾಜರೆಡ್ಡಿ ಪಾಟೀಲ, ಬಸವಂತರೆಡ್ಡಿ ಮಲ್ಹಾರ, ಮಾಣಿಕರೆಡ್ಡಿ ಕುರಕುಂದಿ, ಮಹೇಂದ್ರರೆಡ್ಡಿ ಕಂದಕೂರ, ಸಾಹೇಬಗೌಡ ಯಡ್ಡಳ್ಳಿ, ರಮೇಶ ದೊಡ್ಮನಿ, ಮಲ್ಲಣಗೌಡ ಕೌಳೂರ, ವೆಂಕಟರೆಡ್ಡಿ ಹತ್ತಿಕುಣಿ  ಇದ್ದರು.

Post Comments (+)