ಶೌಚ ತ್ಯಾಜ್ಯ : ಗ್ರಾಮಸ್ಥರ ಆಕ್ರೋಶ

7

ಶೌಚ ತ್ಯಾಜ್ಯ : ಗ್ರಾಮಸ್ಥರ ಆಕ್ರೋಶ

Published:
Updated:
Prajavani

ಬೆಂಗಳೂರು: ಹೆಸರಘಟ್ಟ ಹೋಬಳಿ ಬಿಳಿಜಾಜಿ ಗ್ರಾಮದ ದಲಿತ ಕಾಲೊನಿಯ ಬಳಿ ಶೌಚಾಲಯ ಗುಂಡಿಯ ಹೊಲಸು ತಂದು ಸುರಿಯುತ್ತಿರುವುದರ ವಿರುದ್ಧ ಹುರುಳಿ ಚಿಕ್ಕನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

‘ಈ ಜಮೀನಿನ ಸುತ್ತ ದಲಿತರ ಮನೆಗಳಿವೆ. ಮಲದ ಗಬ್ಬುವಾಸನೆ ಇಡೀ ಊರನ್ನು ಅವರಿಸುತ್ತಿದೆ. ಗಬ್ಬುವ ವಾಸನೆಗೆ ಮಕ್ಕಳಲ್ಲಿ ಭೇದಿ ಮತ್ತು ವಾಂತಿ ಕಾಣಿಸಿಕೊಂಡಿದೆ’ ಎಂದು ಗ್ರಾಮದ ನಿವಾಸಿ ವೆಂಕಟರಮಣಪ್ಪ ಆಕ್ರೋಶ ವ್ಯಕ್ತಪಡಿಸಿದರು.

‘ಹುರುಳಿ ಚಿಕ್ಕನಹಳ್ಳಿ ಗ್ರಾಮ ಪಂಚಾಯಿತಿಯ ಅಭಿವೃದ್ದಿ ಅಧಿಕಾರಿಗೆ ಈ ಬಗ್ಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಪ್ರತಿ ದಿನ ಐದಾರು ಲಾರಿ ಲೋಡ್‌ ಮಲ ತಂದು ಸುರಿಯಲಾಗುತ್ತಿದೆ. ನಾವು ದಲಿತರು ಎಂದು ಅಸಡ್ಡೆ ಮಾಡುತ್ತಿದ್ದಾರೆ’ ಎಂದು ಸ್ಥಳೀಯರಾದ ಸರೋಜಮ್ಮ ಬೇಸರ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !