ಗುರುವಾರ , ಆಗಸ್ಟ್ 22, 2019
25 °C
ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಮಕ್ಕಳ ಮನವಿ

‘ಬಸ್, ಗ್ರಂಥಾಲಯ ಸೌಲಭ್ಯ ಒದಗಿಸಿ’

Published:
Updated:
Prajavani

ಹೆಸರಘಟ್ಟ: ‘ಬಸ್ ಸೌಲಭ್ಯ ಕಲ್ಪಿಸಿ, ಗ್ರಂಥಾಲಯ ನಿರ್ಮಿಸಿಕೊಡಿ’ ಎಂದು ಐವರಕಂಡಪುರ ಗ್ರಾಮದಲ್ಲಿನ ದೇವರಾಜು ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಜಿಲ್ಲಾ ಪಂಚಾಯಿತಿ ಸದಸ್ಯರಲ್ಲಿ ಮನವಿ ಮಾಡಿದರು.

ವಿದ್ಯಾರ್ಥಿ ನಿಲಯ ಪರಿಶೀಲನೆಗೆ ಬಂದಿದ್ದ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಸದಸ್ಯರಾದ ಚೊಕ್ಕನಹಳ್ಳಿ ವೆಂಕಟೇಶ್, ರವಿಕುಮಾರ್, ಸುಷ್ಮಾ ಮುನಿರಾಜು ಅವರ ಬಳಿ ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡರು.

‘ವಿದ್ಯಾರ್ಥಿ ನಿಲಯದಲ್ಲಿರುವ ಬಹುತೇಕ ವಿದ್ಯಾರ್ಥಿಗಳು ಕೆಂಗೇರಿ, ಮಲ್ಲೇಶ್ವರ, ನಾಗವಾರ, ಮೆಜೆಸ್ಟಿಕ್‍ನಲ್ಲಿರುವ ಕಾಲೇಜುಗಳಿಗೆ ತೆರಳುತ್ತಿದ್ದಾರೆ. ಸಂಜೆ ನಂತರ ಇಲ್ಲಿಗೆ ಬಸ್ ಸೌಕರ್ಯ ಇಲ್ಲ. ಹೆಸರುಘಟ್ಟದಿಂದ ನಾಲ್ಕು ಕಿ.ಮೀ ದೂರ ನಡೆದುಕೊಂಡೇ ಬರಬೇಕು’ ಎಂದು ಹೇಳಿದರು. 

‘ವಿದ್ಯಾರ್ಥಿ ನಿಲಯಕ್ಕೆ ಭದ್ರತೆ ಇಲ್ಲ, ಗ್ರಂಥಾಲಯದ ಸೌಲಭ್ಯವೂ ಇಲ್ಲ. ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಗ್ರಂಥಾಲಯ ನಿರ್ಮಿಸಿಕೊಡಬೇಕು’ ಎಂದು ಕೇಳಿದರು. ‘35 ವರ್ಷ ಹಳೆಯದಾದ ಕಟ್ಟಡದಲ್ಲಿ ವಿದ್ಯಾರ್ಥಿ ನಿಲಯವಿದ್ದು, ₹32 ಲಕ್ಷ ವೆಚ್ಚದಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳ ಬೇಡಿಕೆಗಳನ್ನು ಶೀಘ್ರವೇ ಈಡೇರಿಸಲಾಗುವುದು’ ಎಂದು ಚೊಕ್ಕನಹಳ್ಳಿ ವೆಂಕಟೇಶ್ ಹೇಳಿದರು.

Post Comments (+)