‘ನಮ್ಮೂರು ಹಬ್ಬ’ದಲ್ಲಿ ಎತ್ತುಗಳಿಗೆ ಸಿಂಗಾರ

ಭಾನುವಾರ, ಮಾರ್ಚ್ 24, 2019
27 °C
ಹಲ್ಲುಗಳ ಸಂಖ್ಯೆ, ತಳಿಯ ಮಾನದಂಡದ ಮೇಲೆ ವಿಜೇತರ ಆಯ್ಕೆ

‘ನಮ್ಮೂರು ಹಬ್ಬ’ದಲ್ಲಿ ಎತ್ತುಗಳಿಗೆ ಸಿಂಗಾರ

Published:
Updated:
Prajavani

ಹೆಸರಘಟ್ಟ: ಜೋಡೆತ್ತುಗಳ ಕೊಂಬುಗಳಲ್ಲಿ ಗೆಜ್ಜೆಗಳ ಸಪ್ಪಳ, ವಿವಿಧ ಹೂವುಗಳಿಂದ ಶೃಂಗಾರಗೊಂಡ ಒಂಟೆತ್ತುಗಳು, ತಮಟೆ ನಾದದೊಂದಿಗೆ ಸಂಭ್ರಮದ ಮೆರವಣಿಗೆಯಲ್ಲಿ ಎತ್ತು
ಗಳನ್ನು ಕರೆತಂದ ಗ್ರಾಮಸ್ಥರು, ಡೊಳ್ಳು, ಕೊಂಬು ಕಹಳೆಗಳ ಝೇಂಕಾರದಿಂದ ಕಳೆಗಟ್ಟಿದ ವಾತಾವರಣ.

ಇವೆಲ್ಲವು ತೋಟಗೆರೆ ಗ್ರಾಮದಲ್ಲಿ ಸಿ.ಎನ್.ಅರ್. ಹಿತಚಿಂತನ ಚಾರಿಟಬಲ್ ಟ್ರಸ್ಟ್ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಮಹಾಶಿವರಾತ್ರಿ ಪ್ರಯುಕ್ತ ಆಯೋಜಿಸಿದ್ದ ‘ನಮ್ಮೂರು–ನಮ್ಮವರ ಹಬ್ಬ’ದಲ್ಲಿ ಮೇಳೈಸಿದವು.

ಬೊಮ್ಮಶೆಟ್ಟಿಹಳ್ಳಿ, ಗೋಪಾಲಪುರ, ಕುಕ್ಕನಹಳ್ಳಿ, ಶಾಮಭಟ್ಟರ ಪಾಳ್ಯ ಗ್ರಾಮಗಳಿಂದ ರೈತರು ಎತ್ತು
ಗಳನ್ನು ಸಿಂಗರಿಸಿಕೊಂಡು ಬಂದು ಜೋಡೆತ್ತಿನ ಮತ್ತು ಒಂಟೆತ್ತಿನ ಸ್ಪರ್ಧೆಯಲ್ಲಿ ಭಾಗವಹಿಸಿದರು.
ಎತ್ತಿನ ಆರೋಗ್ಯ, ಹಲ್ಲುಗಳ ಸಂಖ್ಯೆ, ವಿವಿಧ ತಳಿಯ ಮಾನದಂಡದ ಮೇಲೆ ಪಶುವೈದ್ಯಾಧಿಕಾರಿ ಡಾ.ಸಿದ್ದಪ್ಪ
ಅವರು ವಿಜೇತರನ್ನು ಆಯ್ಕೆ ಮಾಡಿದರು.

ಸಿಗೇಹಳ್ಳಿ ಗ್ರಾಮದ ನಾಗರಾಜ್, ಹೆಸರಘಟ್ಟ ಗ್ರಾಮದ ನಾರಾಯಣಪ್ಪ, ಲಕ್ಕೇನಹಳ್ಳಿಯ ಬೈರೇಗೌಡ ಅವರ ರಾಸುಗಳಿಗೆ ಪ್ರಥಮ ಬಹುಮಾನವನ್ನು ನೀಡಲಾಯಿತು. ದ್ವಿತೀಯ ಬಹುಮಾನವನ್ನು ಸೊಂಡೆಕೊಪ್ಪ ಗ್ರಾಮದ ರಾಜಣ್ಣ, ಪಿಳ್ಳಹಳ್ಳಿ
ಗ್ರಾಮದ ಗಂಗರಾಜು ಮತ್ತು ಗೋವಿಂದರಾಜು ಅವರ ಎತ್ತುಗಳಿಗೆ ನೀಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !