ಯುವಕ ಆತ್ಮಹತ್ಯೆ; ಅಂತ್ಯಕ್ರಿಯೆ ನೆರವೇರಿಸಿದ ಸಂಬಂಧಿ

7
ಆರ್ಥಿಕ ಅಸಹಾಯಕತೆ; ಅಂತ್ಯಸಂಸ್ಕಾರಕ್ಕೆ ಬರಲಾಗದ ತಾಯಿ

ಯುವಕ ಆತ್ಮಹತ್ಯೆ; ಅಂತ್ಯಕ್ರಿಯೆ ನೆರವೇರಿಸಿದ ಸಂಬಂಧಿ

Published:
Updated:
Deccan Herald

ಬೆಂಗಳೂರು: ನಗರಕ್ಕೆ ಸಿಕ್ಕಿಂನಿಂದ ಬಂದು ಎಂಟೇ ದಿನದಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವಕ. ಕಡುಬಡತನದ ಕಾರಣದಿಂದ  ಮೃತದೇಹ ನೋಡಲು ಅವನ ತಾಯಿಗೆ ಬರಲಾಗದೆ ಸಮೀಪದ ಬಂಧು ಅಂತ್ಯಸಂಸ್ಕಾರ ನಡೆಸಿದರು.

ಹೆಸರಘಟ್ಟ ಸಮೀಪದ ಹುರುಳಿ ಚಿಕ್ಕನಹಳ್ಳಿ ಗ್ರಾಮದ  ಬ್ಲ್ಯಾಕ್‌ ಆ್ಯಂಡ್‌ ವೈಟ್ ಡಾಬಾದಲ್ಲಿ 8 ದಿನಗಳ ಹಿಂದೆ ಅಡುಗೆ ಸಹಾಯಕನಾಗಿ ಲಕ್ಷ್ಮಣ್ ಲಿಂಬೋ (18) ಸೇರಿಕೊಂಡಿದ್ದ. ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಂಡ. ಘಟನೆಗೆ ಕಾರಣ ತಿಳಿದುಬಂದಿಲ್ಲ ಎಂದು ಸೋಲದೇವನಹಳ್ಳಿ ಠಾಣೆ ಪೊಲೀಸರು ತಿಳಿಸಿದರು. 

ಯುವಕನ ತಾಯಿ ಸಾವಿತ್ರಿ ಲಿಂಬೋ ಸಿಕ್ಕಿಂನಲ್ಲಿ ವಾಸವಾಗಿದ್ದಾರೆ. ಕಡು ಬಡತನ ಇರುವುದರಿಂದ ಮಗನ ಅಂತ್ಯ ಸಂಸ್ಕಾರವನ್ನು ಬೆಂಗಳೂರಿನಲ್ಲಿ ಮಾಡುವಂತೆ ಪೋಲಿಸರಿಗೆ ಕೋರಿದರು. ತಾಯಿ ಒಪ್ಪಿಗೆ ಮೇರೆಗೆ ಮೃತನ ಭಾವ ಅಂತ್ಯ ಸಂಸ್ಕಾರ ನೆರವೇರಿಸಿದರು.

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 5

  Sad
 • 0

  Frustrated
 • 2

  Angry

Comments:

0 comments

Write the first review for this !