ಚುನಾವಣೆ: ಬೇಡಿಕೆ ಪಟ್ಟಿ ಬಿಡುಗಡೆ

ಶುಕ್ರವಾರ, ಏಪ್ರಿಲ್ 26, 2019
34 °C

ಚುನಾವಣೆ: ಬೇಡಿಕೆ ಪಟ್ಟಿ ಬಿಡುಗಡೆ

Published:
Updated:
Prajavani

ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು ಎಂದು ಗ್ರಾಮ ಪಂಚಾಯತ್‌ ಹಕ್ಕೊತ್ತಾಯ ಆಂದೋಲನ ಸಂಘಟನೆಯು ರಾಜಕೀಯ ಪಕ್ಷಗಳನ್ನು ಒತ್ತಾಯಿಸಿದೆ.

ಬೇಡಿಕೆಗಳ ಪಟ್ಟಿಯನ್ನು ಅದು ಗುರುವಾರ ಬಿಡುಗಡೆ ಮಾಡಿದೆ.

ಪಂಚಾಯತ್‌ರಾಜ್‌ ಅಧಿನಿಯಮದಲ್ಲಿ ಗ್ರಾಮ ಪಂಚಾಯಿತಿಗಳಿಗೆ ನೀಡುವ ವಿವಿಧ ರೀತಿಯ ಅನುದಾನಗಳು ಮುಕ್ತವಾಗಿರಬೇಕು. ವೆಚ್ಚಗಳಿಗೆ ನಿರ್ಬಂಧ ವಿಧಿಸಬಾರದು. ಗ್ರಾಮ ಪಂಚಾಯಿತಿ ಬಜೆಟ್‌ ಪತ್ರ ಗ್ರಾಮಸಭೆಯ ಮಂಜೂರಾತಿಗೆ ಒಳಪಟ್ಟಿರಬೇಕು ಎಂದು ಮನವಿ ಮಾಡಿದೆ.

ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನೀಡುವ ಕೂಲಿ ಹಾಗೂ ಸಾಮಗ್ರಿ ಖರೀದಿ ಅನುದಾನದ ಅನುಪಾತದ ಪ್ರಮಾಣ 60:40ರ ಬದಲಿಗೆ 70:30 ಆಗಬೇಕು. ವಸತಿ ಯೋಜನೆಯಡಿ ನಿರ್ಮಿಸಿದ ಮನೆಗಳಿಗೆ ನಿರ್ಮಾಣವಾದ 15 ವರ್ಷಗಳ ಬಳಿಕ ನೀಡುವ ದುರಸ್ತಿ ವೆಚ್ಚವನ್ನು ಹೆಚ್ಚಿಸಬೇಕು. ಪಂಚಾಯಿತಿ ಅಧ್ಯಕ್ಷರನ್ನು ಪೂರ್ಣಕಾಲಿಕ ಮುಖ್ಯ ಕಾರ್ಯನಿರ್ವಾಹಕ ಎಂದು ಪರಿಗಣಿಸಿ ಸೂಕ್ತ ವೇತನ ನೀಡಬೇಕು ಎಂದು ಸಂಘಟನೆ ಒತ್ತಾಯಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !