ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರಘಟ್ಟ: ಕೆರೆಗಳಿಗೆ ಜೀವಕಳೆ

Last Updated 1 ಅಕ್ಟೋಬರ್ 2019, 19:38 IST
ಅಕ್ಷರ ಗಾತ್ರ

ಹೆಸರಘಟ್ಟ: ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಹೋಬಳಿಯ ಕೆರೆಗಳಲ್ಲಿ ನೀರು ಸಂಗ್ರಹವಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಸೀರೆ ಸಂದ್ರ, ಬ್ಯಾತ, ಕಾಕೋಳು, ಬುಡವನಹಳ್ಳಿ, ಕುಂಬಾರಹಳ್ಳಿ, ಚಲ್ಲಹಳ್ಳಿ ಗ್ರಾಮಗಳ ಕೆರೆಗಳ ತಳಮಟ್ಟದಲ್ಲಿ ನೀರು ಸಂಗ್ರಹಗೊಂಡಿದೆ. ಈ ಭಾಗದಲ್ಲಿ ನಿಷ್ಕ್ರೀಯಯಗೊಂಡಿದ್ದ ಅನೇಕ ಕೊಳವೆ ಬಾವಿಗಳಲ್ಲಿ ಅಂತರ್ಜಲ ಚಿಮ್ಮಿ ಬಂದಿದ್ದು, ರೈತರ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಟೊಮೆಟೊ, ಮೆಣಸಿನಕಾಯಿ, ಬೀಟ್ ರೂಟ್, ಬದನೇಕಾಯಿ ಗಿಡಗಳನ್ನು ರೈತರು ನೆಡುತ್ತಿದ್ದಾರೆ.

‘ಕೃಷಿ ಹೊಂಡದಲ್ಲಿ ನೀರು ಸಂಗ್ರಹವಾಗುತ್ತಿದೆ. ಈ ನೀರಿನಲ್ಲಿ ತೊಂಡೆಕಾಯಿ, ಬಿನ್ಸ್, ಗುಲಾಬಿ ಹೂ, ಸೇವಂತಿ ಹೂಗಳನ್ನು ಚೆನ್ನಾಗಿ ಬೆಳೆಯಬಹುದು. ಕೆರೆಗಳಲ್ಲಿ ನೀರು ಸಂಗ್ರಹವಾಗಿರುವುದರಿಂದ ಕೃಷಿಕರಿಗೆ ಮರು ಜೀವ ಬಂದಂತೆ ಅಗಿದೆ’ ಎಂದು ಬ್ಯಾತ ಗ್ರಾಮದ ಕೃಷಿಕ ಬಸವರಾಜು ಹೇಳಿದರು.

ದಾಸನಪುರ ಹೋಬಳಿ ಗೋಪಾಲಪುರ ಗ್ರಾಮದ ಕೆರೆಯನ್ನು ಕೆರೆ ಸಂಜೀವಿನಿ ಯೋಜನೆಯಡಿಯಲ್ಲಿ ಹೂಳು ತೆಗೆದು ಅಭಿವೃದ್ಧಿಪಡಿಸಲಾಗಿದೆ. ಕೆರೆಯಲ್ಲಿ ಈಗ ಒಂದು ಅಡಿಯಷ್ಟು ನೀರು ಸಂಗ್ರಹವಾಗಿದೆ. ಇದರಿಂದ ಕೆರೆಯ ಅಸುಪಾಸಿನಲ್ಲಿ ಬಾಳೆ, ಅಡಿಕೆ, ಹೂಗಳನ್ನು ಬೆಳೆಯುವ ರೈತರಿಗೆ ಹೆಚ್ಚಿನ ಅನುಕೂಲವಾಗಿದೆ’ ಎಂದು ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಸ್ವಾಮಿ ತಿಳಿಸಿದರು.

‘ಹೆಸರಘಟ್ಟ ಹೋಬಳಿಯಲ್ಲಿ 32 ಕೆರೆಗಳಿದ್ದು, ಆ ಕೆರೆಗಳ ಹೂಳು ತೆಗೆದು ಅಭಿವೃದ್ಧಿಪಡಿಸಿದರೆ ರೈತರಿಗೆ ಹೆಚ್ಚು ಅನುಕೂಲವಾಗುತ್ತದೆ. ಆದರೆ, ಇಲಾಖೆ ಅಧಿಕಾರಿಗಳಿಗೆ, ಗ್ರಾಮ ಪಂಚಾಯಿತಿ ಅಧಿಕಾರಿ ಮತ್ತು ಜನಪ್ರತಿನಿಧಿಗಳಿಗೆ ಈ ಬಗ್ಗೆ ಕಾಳಜಿ ಇಲ್ಲ’ ಎಂದು ಹೆಸರಘಟ್ಟ ಗ್ರಾಮದ ರೈತ ಸೋಮಶೇಖರ್ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT