ಬುಧವಾರ, ಅಕ್ಟೋಬರ್ 16, 2019
28 °C

ಐಎಂಎ: ಐವರ ಜಾಮೀನು ಅರ್ಜಿ ವಜಾ

Published:
Updated:

ಬೆಂಗಳೂರು: ಐಎಂಎ (ಐ ಮಾನಿಟರಿ ಅಡ್ವೈಸರಿ) ಬಹುಕೋಟಿ ವಂಚನೆ ಪ್ರಕರಣದ ಐವರು ಆರೋಪಿಗಳಿಗೆ ಜಾಮೀನು ನಿರಾಕರಿಸಿರುವ ಹೈಕೋರ್ಟ್‌, ಒಬ್ಬ ಆರೋಪಿಗೆ ಜಾಮೀನು ನೀಡಿದೆ.

ಈ ಕುರಿತಂತೆ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಕೆ.ಎನ್‌.ಫಣೀಂದ್ರ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಪ್ರಕಟಿಸಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಮಾಜಿ ಕಾರ್ಪೋರೇಟರ್ ಸೈಯದ್ ಮುಜಾಹಿದ್‌ಗೆ ಜಾಮೀನು ಮಂಜೂರು ಮಾಡಿದೆ.

ಮೌಲ್ವಿ ಮೊಹಮದ್‌ ಹನೀಫ್‌ ಅಫ್ಸರ್ ಅಜೀಜ್‌, ಮೊಹಮ್ಮದ್ ಅಕ್ಬರ್ ಶರೀಫ್‌ ಅಲಿಯಾಸ್ ಉಮರ್ ಶರೀಫ್‌, ಎ. ನಿಜಾಮುದ್ದೀನ್, ಎ. ಅಫ್ಸರ್ ಪಾಷಾ ಹಾಗೂ ಸನಾವುಲ್ಲಾ ಅರ್ಜಿಗಳನ್ನು ವಜಾಗೊಳಿಸಲಾಗಿದೆ.

Post Comments (+)