ಬ್ರಿಗೇಡ್‌ನಿಂದ ಗೃಹ ಉತ್ಸವ

7

ಬ್ರಿಗೇಡ್‌ನಿಂದ ಗೃಹ ಉತ್ಸವ

Published:
Updated:

ಬೆಂಗಳೂರು: ಬ್ರಿಗೇಡ್‌ ಸಂಸ್ಥೆಯಿಂದ ‘ಬ್ರಿಗೇಡ್‌ ಬೃಹತ್‌ ಗೃಹ ಉತ್ಸವ –2019’ ಈಗಾಗಲೇ ಆರಂಭವಾಗಿದ್ದು, ಫೆ. 17ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಬ್ರಿಗೇಡ್‌ ಕಂಪನಿ ಹೊಸದಾಗಿ ಆರಂಭಿಸಿದ ಗೃಹ ನಿರ್ಮಾಣ ಯೋಜನೆಗಳಿಗೆ ಆಕರ್ಷಕ ಕೊಡುಗೆ ನೀಡಲಿದೆ.

ಹೊಸ ನಿರ್ಮಾಣಗಳಲ್ಲಿ ಮನೆ ಖರೀದಿ ಮಾಡಿದವರಿಗೆ ‘ವಿ ಪೇ ಯು ಸ್ಟೇ’ ಯೋಜನೆ ಅಡಿ (ನೀವು ಉಳಿದುಕೊಳ್ಳಿ– ನಾವು ಪಾವತಿಸುತ್ತೇವೆ) ಮನೆ ನಿರ್ಮಾಣ ಪೂರ್ಣಗೊಳ್ಳುವವರೆಗೆ ಗ್ರಾಹಕರು ಉಳಿದುಕೊಳ್ಳುವ ಮನೆಯ ಬಾಡಿಗೆಯನ್ನು ಬ್ರಿಗೇಡ್‌ ಕಂಪನಿ ಪಾವತಿಸಲಿದೆ. ಇದರಿಂದ ಬ್ರಿಗೇಡ್‌ ನಿರ್ಮಾಣದ ಮನೆಗಳಲ್ಲಿ ವಾಸ್ತವ್ಯ ಹೂಡುವವರೆಗಿನ ಬಾಡಿಗೆ ವೆಚ್ಚವನ್ನು ಗ್ರಾಹಕರು ಉಳಿಸಬಹುದು ಎಂದು ಕಂಪನಿ ಹೇಳಿದೆ. 

ಈಗಾಗಲೇ ನಿರ್ಮಾಣ ಪೂರ್ಣಗೊಂಡಿರುವ ಮನೆಗಳನ್ನು ಖರೀದಿಸುವವರಿಗೆ ಉಚಿತ ಪೀಠೋಪಕರಣ ಅಳವಡಿಕೆ ಮತ್ತು ಒಳಾಂಗಣ ಅಲಂಕಾರ ಮಾಡಿಕೊಡಲಾಗುವುದು ಮತ್ತು ವಿಶೇಷ ಕೊಡುಗೆಯಾಗಿ ಯಾವುದೇ ಪಂಚತಾರಾ ಹೋಟೆಲ್‌ನಲ್ಲಿ ಉಳಿಯುವ ಅವಕಾಶ ದೊರೆಯಲಿದೆ.

‘ಗ್ರಾಹಕರಲ್ಲಿ ಸಕಾರಾತ್ಮಕ ಅನುಭವ ಮೂಡಿಸಲು ಇದು ನಿಜವಾಗಿಯೂ ಇನ್ನೊಂದು ಒಳ್ಳೆಯ ಅವಕಾಶ’ ಎಂದು ಬ್ರಿಗೇಡ್‌ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಪವಿತ್ರಾ ಶಂಕರ್‌ ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !