ನಿರ್ಗತಿಕರನ್ನು ಗುರುತಿಸಲು ಸಮೀಕ್ಷೆ

7
ಬಿಬಿಎಂಪಿ ಜತೆ ಕೈಜೋಡಿಸಿದ ಇಂಡೋ ಗ್ಲೋಬಲ್ ಸೋಷಿಯಲ್ ಸರ್ವಿಸ್ ಸೊಸೈಟಿ

ನಿರ್ಗತಿಕರನ್ನು ಗುರುತಿಸಲು ಸಮೀಕ್ಷೆ

Published:
Updated:
Deccan Herald

ಬೆಂಗಳೂರು: ವಿವಿಧ ಕಾರಣಗಳಿಗಾಗಿ ಮನೆಯಿಂದ ಹೊರಬಿದ್ದು, ಹೆದ್ದಾರಿಯಲ್ಲಿ ಲಾರಿ ಹಿಡಿದು ನಗರಕ್ಕೆ ಬಂದು, ರೈಲ್ವೆ ನಿಲ್ದಾಣ, ಸುರಂಗ ಮಾರ್ಗ, ಬಸ್‌ ನಿಲ್ದಾಣ ಹಾಗೂ ಪಾದಚಾರಿ ಮಾರ್ಗಗಳನ್ನೇ ಮನೆಯಾಗಿ ಮಾಡಿಕೊಂಡು ಜೀವನ ಸಾಗಿಸು
ತ್ತಿರುವ ನಿರ್ಗತಿಕರ ಕುರಿತು ಸಮೀಕ್ಷೆ ನಡೆಸಲು ಬಿಬಿಎಂಪಿ ಮುಂದಾಗಿದೆ.

ಈ ಕಾರ್ಯಕ್ಕೆ ವಸತಿರಹಿತರ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಇಂಡೋ ಗ್ಲೋಬಲ್ ಸೋಷಿಯಲ್ ಸರ್ವಿಸ್ ಸೊಸೈಟಿ ಬಿಬಿಎಂಪಿಯ ಜೊತೆ ಕೈಜೋಡಿಸಿದೆ.

ಸಮೀಕ್ಷೆ ನಡೆಸಲು ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಮೂರು ದಿನಗಳ ಕಾಲ ನಗರದ ಕೆ.ಆರ್ ಮಾರ್ಕೆಟ್‌, ಕೆಂಪೇಗೌಡ ಬಸ್‌ ನಿಲ್ದಾಣ ಹಾಗೂ ಕಾಟನ್‌ಪೇಟೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ವಸತಿರಹಿತರನ್ನು ಗುರುತಿಸಿ ಅವರನ್ನು ಸಂದರ್ಶಿಸಲಿವೆ.

ನಿರ್ಗತಿಕರ ವಿವರಗಳನ್ನು ಪಡೆದುಕೊಂಡು ಅಂಕಿ–ಅಂಶಗಳನ್ನು ಪಾಲಿಕೆಗೆ ಸಲ್ಲಿಸುತ್ತದೆ. ಅದನ್ನು ಅಧ್ಯಯನ ಮಾಡಿದ ಬಳಿಕ ಬಿಬಿಎಂಪಿ, ನಿರಾಶ್ರಿತರಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಸಾಮಾಜಿಕ ಭದ್ರತೆಯನ್ನು ಒದಗಿಸಲಿದೆ.

ಹಿಂದೆಯೂ ಸಮೀಕ್ಷೆ ನಡೆದಿತ್ತು: 2010ರಲ್ಲಿ ಸುಪ್ರೀಂಕೋರ್ಟ್‌ ನಿರ್ಗತಿಕರಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿತ್ತು. ಸರ್ಕಾರೇತರ ಸಂಸ್ಥೆಯೊಂದು ಸಮೀಕ್ಷೆ ಮಾಡಿದಾಗ ನಗರದಲ್ಲಿ 17000 ನಿರ್ಗತಿಕರಿರುವುದು ಕಂಡು ಬಂದಿತ್ತು. ‌ಆಗ ಬಿಬಿಎಂಪಿ ಕೆಲವೇ ಜನರಿಗೆ ರಾತ್ರಿ ಮಲಗಲು ವ್ಯವಸ್ಥೆ ಮಾಡಿ ಕೈತೊಳೆದುಕೊಂಡಿತ್ತು. ಈಗ ಮತ್ತೆ ಸಮೀಕ್ಷೆ ಮಾಡಿಸಲು ಮುಂದಾಗಿದೆ.

‘ಮೊದಲಿನಿಂದಲೂ ವಸತಿರಹಿತರನ್ನು ಗುರುತಿಸಿ ಅವರಿಗೆ ಸೂರು ಒದಗಿಸಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದೇವೆ. ಪಾಲಿಕೆ ನಗರದಲ್ಲಿರುವ ನಿರಾಶ್ರಿತರನ್ನು ಗುರುತಿಸಿ ನೆರಳಿನ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ. ನಾವು ಅದರ ಭಾಗವಾಗುತ್ತಿರುವುದು ಖುಷಿ ತಂದಿದೆ’ ಎನ್ನುತ್ತಾರೆ ಇಂಡೋ ಗ್ಲೋಬಲ್ ಸೋಷಿಯಲ್ ಸರ್ವಿಸ್ ಸೊಸೈಟಿ ಸಂಸ್ಥೆಯ ರಜನಿ.

ಬರಹ ಇಷ್ಟವಾಯಿತೆ?

 • 4

  Happy
 • 2

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !