ಅಪರಾಧ ತಡೆಗೆ ಜನರ ಸಹಕಾರ ಅಗತ್ಯ

7

ಅಪರಾಧ ತಡೆಗೆ ಜನರ ಸಹಕಾರ ಅಗತ್ಯ

Published:
Updated:
Deccan Herald

ಹೊಸಕೋಟೆ: ಅಪರಾಧ ತಡೆಗಟ್ಟುವಲ್ಲಿ ಪೊಲೀಸರೊಂದಿಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಸಬ್ ಇನ್ಸ್‌ಪೆಕ್ಟರ್‌ ಸಿ.ಎಂ.ರಾಜು ಹೇಳಿದರು.

ಸ್ಥಳೀಯ ಪೊಲೀಸರು ಬುಧವಾರ ಜಿಕೆಬಿಎಂಎಸ್ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಬಹಳಷ್ಟು ಅಪರಾಧಗಳು ನಮ್ಮ ನಿರ್ಲಕ್ಷ್ಯದಿಂದ ನಡೆಯುತ್ತಿವೆ. ನಾವು ಜಾಗ್ರತೆ ವಹಿಸಿದಲ್ಲಿ ಅದನ್ನು ತಡೆಗಟ್ಟಬಹುದು’ ಎಂದರು.

ಅಪರಾಧ ತಡೆಯುವಲ್ಲಿ ಮತ್ತು ರಸ್ತೆ ಸುರಕ್ಷತೆ ಕಾಪಾಡುವಲ್ಲಿ ಸಾರ್ವಜನಿಕರು, ಶಾಲಾ ಮಕ್ಕಳು ಅನುಸರಿಸಬೇಕಾದ ಕ್ರಮದ ಬಗ್ಗೆ ಮಾಹಿತಿ ನೀಡಿದರು. ನಂತರ ಶಾಲಾ ಮಕ್ಕಳು ಭಿತ್ತಿಪತ್ರದೊಂದಿಗೆ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಜಾಗೃತಿ ಜಾಥಾ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !