ಶಸ್ತ್ರಚಿಕಿತ್ಸೆ ವೇಳೆ ದೇಹದಲ್ಲೇ ಉಳಿದ ಬ್ಲೇಡ್: ಮಹಿಳೆ ಸಾವು

ಸೋಮವಾರ, ಏಪ್ರಿಲ್ 22, 2019
29 °C

ಶಸ್ತ್ರಚಿಕಿತ್ಸೆ ವೇಳೆ ದೇಹದಲ್ಲೇ ಉಳಿದ ಬ್ಲೇಡ್: ಮಹಿಳೆ ಸಾವು

Published:
Updated:

ಬೆಂಗಳೂರು: ‘ಶಸ್ತ್ರಚಿಕಿತ್ಸೆ ನಡೆಸಿದ ವೇಳೆ ದೇಹದೊಳಗೆ ಬ್ಲೇಡ್ ಉಳಿಸಿದ್ದರಿಂದಾಗಿ ಎಚ್‌.ಪದ್ಮಾ (62) ಎಂಬುವರು ಮೃತಪಟ್ಟಿದ್ದಾರೆ’ ಎಂದು ಆರೋಪಿಸಿ ಮೃತರ ಪುತ್ರ ಕೆ. ಅನಿಲ್ ಎಂಬುವರು ಸಂಪಂಗಿರಾಮನಗರ ಠಾಣೆಗೆ ದೂರು ನೀಡಿದ್ದಾರೆ.

‘ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ತಾಯಿ ಪದ್ಮಾ ಅವರ ಸಾವಿಗೆ ಕಾರಣ’ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಅದರನ್ವಯ ಪೊಲೀಸರು, ಖಾಸಗಿ ಆಸ್ಪತ್ರೆಯ ಆಡಳಿತ ಮಂಡಳಿ ಹಾಗೂ ಅಲ್ಲಿ ಕೆಲಸ ಮಾಡುವ ಒಂಬತ್ತು ಮಂದಿ ವೈದ್ಯರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

‘ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. 2015ರ ಏಪ್ರಿಲ್ 6ರಂದು ಶಸ್ತ್ರಚಿಕಿತ್ಸೆ ಮಾಡಿದ್ದ ವೈದ್ಯರು, ಬ್ಲೇಡನ್ನು ದೇಹದೊಳಗೆ ಬಿಟ್ಟಿದ್ದರು. ಅದಾದ ನಂತರ ತಾಯಿಯನ್ನು ಹಲವು ಬಾರಿ ಸ್ಕ್ಯಾನಿಂಗ್‌ಗೆ ಒಳಪಡಿಸಲಾಗಿತ್ತು. ದೇಹದೊಳಗೆ ಬ್ಲೇಡ್‌ ಕಂಡರೂ ವೈದ್ಯರು, ನಮಗೆ ತಿಳಿಸಿರಲಿಲ್ಲ. ದೇಹದೊಳಗೆ ಬ್ಲೇಡ್‌ ಇದ್ದಿದ್ದರಿಂದಾಗಿ ತಾಯಿ 2018ರ ಅಕ್ಟೋಬರ್ 24ರಂದು ಮೃತಪಟ್ಟರು. ಅದನ್ನು ಬೆಂಗಳೂರು ಆಸ್ಪತ್ರೆಯ ವೈದ್ಯಾಧಿಕಾರಿ ದೃಢಪಡಿಸಿದ್ದಾರೆ’ ಎಂದು ಅನಿಲ್ ದೂರಿನಲ್ಲಿ ಹೇಳಿದ್ದಾರೆ.

ಪೊಲೀಸರು, ‘ ಶಸ್ತ್ರಚಿಕಿತ್ಸೆ ವೇಳೆ ದೇಹದೊಳಗೆ ಬ್ಲೇಡ್‌ ಬಿಟ್ಟಿದ್ದ ಬಗ್ಗೆ ವೈದ್ಯರನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಕಲೆಹಾಕಬೇಕಿದೆ’ ಎಂದರು.

Tags: 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 2

  Frustrated
 • 7

  Angry

Comments:

0 comments

Write the first review for this !