ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಉದ್ಯೋಗಿಗಳಿಗೆ ಸ್ಮಾರ್ಟ್‌ ಆರೋಗ್ಯ ಕಾರ್ಡ್‌

Last Updated 16 ಜೂನ್ 2018, 11:15 IST
ಅಕ್ಷರ ಗಾತ್ರ

ನವದೆಹಲಿ: ರೈಲ್ವೆ ಇಲಾಖೆಯ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಸದ್ಯ ನೀಡಲಾಗಿರುವ ದೊಡ್ಡ ವೈದ್ಯಕೀಯ ಕಾರ್ಡ್‌ಗಳಿಗೆ ಬದಲಾಗಿ ಕ್ರೆಡಿಟ್‌ ಕಾರ್ಡ್‌ ರೀತಿಯ ಆರೋಗ್ಯ ಕಾರ್ಡ್‌ಗಳನ್ನು ನೀಡಲು ಇಲಾಖೆ ಚಿಂತನೆ ನಡೆಸಿದೆ.

ಸದ್ಯ ರೈಲ್ವೆ ವಲಯಗಳಲ್ಲಿ ನೀಡಲಾಗಿರುವ ವೈದ್ಯಕೀಯ ಕಾರ್ಡ್‌ಗಳು ಪುಸ್ತಕಗಳ ರೀತಿಯಲ್ಲಿವೆ. ಇವು ಪಡಿತರ ಕಾರ್ಡ್‌ಗಳನ್ನೇ ಹೋಲುತ್ತವೆ.

ಪ್ರತ್ಯೇಕ ವೈದ್ಯಕೀಯ ಗುರುತಿನ ಕಾರ್ಡ್‌ ಅಖಿಲ ಭಾರತ ಮಟ್ಟದ ವಿಶಿಷ್ಟ ಸಂಖ್ಯೆ ಹೊಂದಿದ್ದು, ರೈಲ್ವೆ ಉದ್ಯೋಗಿಗಳಿಗೆ ಮತ್ತು ಅವರ ಅವಲಂಬಿತರಿಗೆ ವಿತರಿಸಲಾಗುವುದು ಎಂದು ರೈಲ್ವೆ ಮಂಡಳಿ ಇತ್ತೀಚೆಗೆ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.

ಇಲಾಖೆಯ ಉದ್ಯೋಗಿಗಳು ಮತ್ತು ಅವರ ಅವಲಂಬಿತರಿಗೆ ನೀಡುವ ವೈದ್ಯಕೀಯ ಗುರುತಿನ ಕಾರ್ಡ್‌ಗಳಲ್ಲಿ ಏಕರೂಪತೆ ತರಲು ಪ್ಲಾಸ್ಟಿಕ್‌ ಕಾರ್ಡ್‌ಗಳನ್ನು ನೀಡಲು ಮಂಡಳಿ ಒಪ್ಪಿಗೆ ನೀಡಿದೆ. ಇವುಗಳ ಗಾತ್ರ ಕ್ರೆಡಿಟ್‌ ಕಾರ್ಡ್‌ನಷ್ಟೇ ಇರುತ್ತದೆ.

ಈ ಕಾರ್ಡ್‌ಗಳು ಬಣ್ಣದ ಪಟ್ಟಿ ಹೊಂದಿರುತ್ತವೆ. ಈ ಪಟ್ಟಿಯು ಕಾರ್ಡ್‌ದಾರರು ಹಾಲಿ ಉದ್ಯೋಗಿಗಳೇ, ನಿವೃತ್ತರೇ ಇಲ್ಲವೇ ಅವಲಂಬಿತರೇ ಎಂಬುದನ್ನು ಗುರುತಿಸಲು ಸಾಧ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT