‘₹ 20 ಸಾವಿರದಲ್ಲಿ ಯುಪಿಎಸ್‌ಸಿ ಪಾಸಾದೆ’

ಶನಿವಾರ, ಏಪ್ರಿಲ್ 20, 2019
31 °C
ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ರ‍್ಯಾಂಕ್‌ ಗಳಿಸಿದವರ ಮಾತು

‘₹ 20 ಸಾವಿರದಲ್ಲಿ ಯುಪಿಎಸ್‌ಸಿ ಪಾಸಾದೆ’

Published:
Updated:
Prajavani

ಬೆಂಗಳೂರು: ಕಾಲೇಜು ಶಿಕ್ಷಣ ಪಡೆಯುವಾಗ ತಂದೆಯ ಅಗಲಿಕೆ, ಮನೆಯ ಹಣಕಾಸಿನ ಸ್ಥಿತಿ ನಿಭಾಯಿಸುವ ಜವಾಬ್ದಾರಿ ಹೆಗಲ ಮೇಲೆ ಬಿದ್ದರೂ ನಾಗಾರ್ಜುನ್‌ ಗೌಡ ಅವರಲ್ಲಿ ಚಿಗುರಿದ್ದ ಅಧಿಕಾರಿಯಾಗುವ ಕನಸಿನ ಸಸಿ ಮುರುಟಿ ಹೋಗಲಿಲ್ಲ.

ಆಸಕ್ತಿಯಿಂದ ಸೇರಿದ್ದ ಎಂಬಿಬಿಎಸ್‌ ಪದವಿ ಪೂರೈಸಿದರು. ಪದವಿ ಅಂತಿಮ ವರ್ಷದಿಂದಲೇ (2016) ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಆರಂಭಿಸಿದರು. ಮೊದಲ ಪ್ರಯತ್ನ ಸಫಲವಾಗಲಿಲ್ಲ. ಆದರೆ, ಇವರು ಪಟ್ಟು ಬಿಡಲಿಲ್ಲ.

ವೈದಕೀಯ ಪದವಿಯಿಂದ ಮಂಡ್ಯ ವೈದ್ಯಕೀಯ ಕಾಲೇಜಿನಲ್ಲಿ ಬೋಧನ ವೃತ್ತಿ ಸಿಕ್ಕಿತು. ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಿತು. ₹10,000 ಖರ್ಚು ಮಾಡಿ, ಅಧ್ಯಯನ ಸಾಮಗ್ರಿ ಖರೀದಿಸಿ ದರು. ದಿನದ ಏಳೆಂಟು ತಾಸು ಸ್ವ-ಅಧ್ಯಯನದಲ್ಲಿ ತೊಡಗಿಸಿಕೊಂಡರು. ಇನ್ನೂ ₹10,000 ವ್ಯಯಿಸಿ ಮಾದರಿ ಪರೀಕ್ಷೆಗಳನ್ನು ಬರೆದರು. ಈ ಶಿಸ್ತುಬದ್ಧ ಅಧ್ಯಯನ ಅವರನ್ನು ಯುಪಿಎಸ್‌ಸಿ ಪರೀಕ್ಷೆಯಲ್ಲಿ 418 ರ‍್ಯಾಂಕ್‌ನಲ್ಲಿ ಕೂರಿಸಿದೆ.

‘ಪೂರ್ವಭಾವಿ ಪರೀಕ್ಷೆ ಎದುರಿಸುವ ಮುನ್ನವೇ, ಮುಖ್ಯ ಪರೀಕ್ಷೆಗೂ ಓದುತ್ತಿದ್ದೆ. ಕನಿಷ್ಠ ಪುಸ್ತಕಗಳು ಮತ್ತು ಗರಿಷ್ಠ ಅಧ್ಯಯನ ನನ್ನ ಕ್ರಮವಾಗಿತ್ತು. ಆಯ್ದುಕೊಂಡಿದ್ದ ವೈದ್ಯಕೀಯ ವಿಜ್ಞಾನವನ್ನು ಅರ್ಥ ಮಾಡಿಕೊಂಡು ಓದಿದ್ದರಿಂದ ಯಶಸ್ಸು ಸಿಕ್ಕಿದೆ. ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತ, ವೈದ್ಯಕೀಯ ಸೇವೆಗಳನ್ನು ಸುಧಾರಿಸುವ ಕನಸಿದೆ’ ಎಂದು ಡಾ.ನಾಗಾರ್ಜುನ್‌ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !