ಬಾವಾ ಮನೆ ಶೋಧ

ಭಾನುವಾರ, ಏಪ್ರಿಲ್ 21, 2019
26 °C

ಬಾವಾ ಮನೆ ಶೋಧ

Published:
Updated:

ಬೆಂಗಳೂರು: ನಿವೃತ್ತ ಡಿಸಿಪಿ, ಕಾಂಗ್ರೆಸ್‌ ಮುಖಂಡ ಜಿ.ಎ ಬಾವಾ ಸೇರಿದಂತೆ ಕೆಲವರ ಮನೆಗಳ ಮೇಲೆ ಸೋಮವಾರ ಆದಾಯ ತೆರಿಗೆ (ಐ.ಟಿ) ಇಲಾಖೆ ದಾಳಿ ನಡೆದಿದೆ.

ಐ.ಟಿ ದಾಳಿಗೆ ಒಳಗಾದವರಲ್ಲಿ ಆಭರಣಗಳ ವ್ಯಾಪಾರಿಯೊಬ್ಬರು ಸೇರಿದ್ದಾರೆ.

ಮಧ್ಯಾಹ್ನ ಬಾವಾ ಅವರ ಆರ್‌.ಟಿ ನಗರದ ಮನೆಗೆ ಧಾವಿಸಿದ ಆರು ಅಧಿಕಾರಿಗಳ ತಂಡ ಅವರ ಮನೆಯನ್ನು ಶೋಧಿಸಿತು. ಈ ಸಮಯದಲ್ಲಿ ಹೊರ ಊರಿಗೆ ಹೋಗಿದ್ದ ಅವರು ಸುದ್ದಿ ತಿಳಿಯುತ್ತಿದ್ದಂತೆ ವಾಪಸ್ ದೌಡಾಯಿಸಿದರು ಎಂದು ಮೂಲಗಳು ತಿಳಿಸಿವೆ.

ಚಿನ್ನದ ಆಭರಣಗಳ ವ್ಯಾಪಾರಿ ಟ್ಯಾನರಿ ರಸ್ತೆ ನಿವಾಸಿ ಎನ್ನಲಾಗಿದೆ. ಇನ್ನೂ ಕೆಲವು ಕಡೆ ದಾಳಿಗಳು ನಡೆದಿವೆ .ಈ ಬಗ್ಗೆ ಮಾಹಿತಿ ಪಡೆಯಲು ಬಾವ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಲು ಪ್ರಯತ್ನಿಸಿದಾಗ ಅವರು ಸಿಗಲಿಲ್ಲ. ಮೊಬೈಲ್‌ ಸ್ವಿಚ್‌ಆಫ್‌ ಆಗಿದೆ ಎಂಬ ಉತ್ತರ ಬಂತು.

ಆದಾಯ ತೆರಿಗೆ ಇಲಾಖೆ ಮೂಲಗಳು ಸುದ್ದಿಯನ್ನು ಖಚಿತಪಡಿಸಿಲ್ಲ. ಅಧಿಕಾರಿಗಳು ಕರೆಗಳನ್ನು ಸ್ವೀಕರಿಸಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !