ಸೋಮವಾರ, ನವೆಂಬರ್ 18, 2019
25 °C

ವಿ.ಪಿ.ಇಕ್ಕೇರಿಗೆ ಬಿಎಂಆರ್‌ಡಿಎ ಹೊಣೆ

Published:
Updated:

ಬೆಂಗಳೂರು: ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ (ಬಿಎಂಆರ್‌ಡಿಎ) ಆಯುಕ್ತ ಹುದ್ದೆಯ ಹೊಣೆಯನ್ನು ಮುಖ್ಯಮಂತ್ರಿಗಳ ಹೆಚ್ಚುವರಿ ಕಾರ್ಯದರ್ಶಿ ವಿ.ಪಿ. ಇಕ್ಕೇರಿ ಅವರಿಗೆ ವಹಿಸಿ ಆದೇಶ ಹೊರಡಿಸಲಾಗಿದೆ.

ಇವರ ಜತೆ ನಾಲ್ವರು ಐಐಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಮುನಿಶ್ ಮೌದ್ಗಿಲ್‌–ಮಹಾನಿರ್ದೇಶಕ, ಆಡಳಿತ ಸುಧಾರಣೆ ಮತ್ತು ತರಬೇತಿ ಸಂಸ್ಥೆ, ಮೈಸೂರು. ಜೆ. ರವಿಶಂಕರ್–ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ. ಎನ್. ಜಯರಾಂ–ವ್ಯವಸ್ಥಾಪಕ ನಿರ್ದೇಶಕ, ಕೃಷ್ಣಾ ಭಾಗ್ಯ ಜಲ ನಿಗಮ. ಎಂ.ಟಿ. ರೇಜು–ಆಯುಕ್ತ, ಭೂದಾಖಲೆ ಇಲಾಖೆ.

ಪ್ರತಿಕ್ರಿಯಿಸಿ (+)