ಐಎಂಎ ಜ್ಯುವೆಲ್ಸ್‌ನಿಂದ 2 ವರ್ಷದಲ್ಲಿ 5,000 ಕೆ.ಜಿ. ಚಿನ್ನ ಮಾರಾಟ

7

ಐಎಂಎ ಜ್ಯುವೆಲ್ಸ್‌ನಿಂದ 2 ವರ್ಷದಲ್ಲಿ 5,000 ಕೆ.ಜಿ. ಚಿನ್ನ ಮಾರಾಟ

Published:
Updated:
Deccan Herald

ಬೆಂಗಳೂರು: ಐಎಂಎ ಜ್ಯುವೆಲ್ಸ್‌ ಕಂಪನಿಯು ಚಿನ್ನ, ವಜ್ರ ಮತ್ತು ಬೆಳ್ಳಿಯ ಆಭರಣಗಳ ಮಾರಾಟ ಕ್ಷೇತ್ರಕ್ಕೆ ಬಂದು ಎರಡು ವರ್ಷ ಪೂರೈಸುತ್ತಿದೆ. ಈ ಕಾಲಾವಧಿಯಲ್ಲಿ 5,000 ಕೆ.ಜಿ. ಚಿನ್ನದ ಆಭರಣಗಳನ್ನು ಮಾರಾಟ ಮಾಡಿದೆ.

ಈ ವಹಿವಾಟಿನ ವೇಳೆ ಸುಮಾರು ₹50 ಕೋಟಿಯಷ್ಟು ಮೊತ್ತವನ್ನು ಸರ್ಕಾರದ ಬೊಕ್ಕಸಕ್ಕೆ ವಿವಿಧ ತೆರಿಗೆ ಮತ್ತು ಜಿಎಸ್‌ಟಿಯಾಗಿ ಪಾವತಿಸಿದೆ. ನಗರದ ಲೇಡಿ ಕರ್ಜನ್‌ ರೋಡ್‌ ಮತ್ತು ಜಯನಗರದಲ್ಲಿನ ಐಎಂಎ ಆಭರಣ ಮಾರಾಟ ಮಳಿಗೆಗಳು ಈ ವಹಿವಾಟಿಗೆ ಗಣನೀಯವಾದ ಕೊಡುಗೆ ನೀಡಿವೆ. 

ಐಎಂಎ ಮಳಿಗೆಗಳಲ್ಲಿ ಕುಂದನ್‌, ಮೀನಾಕರಿ, ರಾಜ್‌ಕೋಟ್‌, ಕಲ್ಕತ್ತಾ ಶೈಲಿಯ ಆಭರಣಗಳು ಮಾರಾಟಕ್ಕಿವೆ. ಸಾಮಾನ್ಯ ದಿನಗಳಲ್ಲೂ ಆಕರ್ಷಕ ಮೇಕಿಂಗ್‌ ಚಾರ್ಜಸ್‌ ಘೋಷಿಸುತ್ತಿದೆ. ಸ್ಟೋನ್‌ ಮತ್ತು ವೇಸ್ಟೆಜ್‌ ಮೇಲೆ ಯಾವುದೇ ಶುಲ್ಕ ವಿಧಿಸುತ್ತಿಲ್ಲ. ಇದರಿಂದಾಗಿ ಗ್ರಾಹಕರು ಆಕರ್ಷಿತರಾಗುತ್ತಿದ್ದಾರೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !