ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರಸ್ನೇಹಿ ನವೋದ್ಯಮಗಳ ಹೆಚ್ಚಳ

ಜಾಗತಿಕ ಪರಿಸರಸ್ನೇಹಿ ಸ್ಟಾರ್ಟ್‌ ಅಪ್ ಶ್ರೇಯಾಂಕ ವರದಿ ಬಿಡುಗಡೆ
Last Updated 23 ಮೇ 2019, 18:51 IST
ಅಕ್ಷರ ಗಾತ್ರ

ಬೆಂಗಳೂರು: ಜಾಗತಿಕ ಪರಿಸರಸ್ನೇಹಿ ನವೋದ್ಯಮಗಳ ಶ್ರೇಯಾಂಕ ಬಿಡುಗಡೆಯಾಗಿದ್ದು, ದೇಶದ ಸಿಲಿಕಾನ್‌ ವ್ಯಾಲಿ ಎಂದೇ ಬಿಂಬಿತವಾದ ಬೆಂಗಳೂರು ಅಗ್ರ 20ರ ಪಟ್ಟಿಯಲ್ಲಿಅವಕಾಶ ಗಿಟ್ಟಿಸಿಕೊಳ್ಳುವಲ್ಲಿಯಶಸ್ವಿಯಾಗಿದೆ.

ದೇಶದ ನವೋದ್ಯಮದ ರಾಜಧಾನಿ ಎಂಬ ಹಿರಿಮೆಗೆ ಪಾತ್ರವಾಗಿರುವ ನಗರದಲ್ಲಿ ಪರಿಸರಸ್ನೇಹಿ ನವೋದ್ಯಮಗಳು ಸಹ ಹೆಚ್ಚುತ್ತಿವೆ. ನಗರದ ಸಂಚಾರ ದಟ್ಟಣೆ, ಮಾಲಿನ್ಯ ಸೇರಿದಂತೆ ವಿವಿಧ ಸಾಮಾಜಿಕ ಸಮಸ್ಯೆಗಳಿಗೆ ನವೋದ್ಯಮದ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ಯುವ ಉದ್ಯಮಿಗಳು ಸಾಬೀತು ಮಾಡುತ್ತಿದ್ದಾರೆ. ಜಾಗತಿಕ ನವೋದ್ಯಮ ಸಮೀಕ್ಷಾ ಸಂಸ್ಥೆ ‘ಸ್ಟಾರ್ಟ್‌ ಅಪ್ ಜಿನೋಮ್’ ಬಿಡುಗಡೆ ಮಾಡಿದ ಜಾಗತಿಕಪರಿಸರಸ್ನೇಹಿ ಸ್ಟಾರ್ಟ್‌ ಅಪ್‌ ಶ್ರೇಯಾಂಕ ಇದಕ್ಕೆ ಪೂರಕವಾಗಿದೆ.ಪರಿಸರ ಸ್ನೇಹಿ ನವೋದ್ಯಮ ಶ್ರೇಯಾಂಕದಲ್ಲಿ 2017ರಲ್ಲಿ 20ನೇ ಸ್ಥಾನದಲ್ಲಿದ್ದ ಬೆಂಗಳೂರು ಈ ವರ್ಷ 18ನೇ ಸ್ಥಾನಕ್ಕೆ ಏರಿದೆ.

ಜಾಗತಿಕ ಪರಿಸರಸ್ನೇಹಿ ಸ್ಟಾರ್ಟ್‌ ಅಪ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ‘ಸಿಲಿಕಾನ್ ವ್ಯಾಲಿ’ ಯಶಸ್ವಿಯಾಗಿದೆ. ನಂತರದ ಸ್ಥಾನವನ್ನು ನ್ಯೂಯಾರ್ಕ್, ಲಂಡನ್ ಹಾಗೂ ಬೀಜಿಂಗ್ ಪಡೆದಿವೆ. ವರದಿಯಲ್ಲಿ ಬೆಂಗಳೂರಿನ ಸಾಧನೆಗೆ ಪ್ರಶಂಸೆ ವ್ಯಕ್ತವಾಗಿದೆ.

ಪ್ರಬಲ ಮಾಹಿತಿ ತಂತ್ರಜ್ಞಾನ ಮೂಲಸೌಕರ್ಯದ ಜೊತೆಗೆ ಪ್ರತಿಭಾವಂತ ತಂತ್ರಜ್ಞರು, ಶಿಕ್ಷಣ ಸಂಸ್ಥೆಗಳು, ಕಂಪನಿಗಳು, ಉತ್ತೇಜನಾ ಕೇಂದ್ರಗಳ ನೆರವಿನಿಂದ ಗುಣಮಟ್ಟದ ಪರಿಸರಸ್ನೇಹಿ ನವೋದ್ಯಮಗಳು ಮುನ್ನೆಲೆಗೆ ಬರುತ್ತಿವೆ. ಅದೇ ರೀತಿ, ಹೊಸ ಯೋಚನೆಗಳಿಗೆ ನೂರಕ್ಕೂ ಅಧಿಕ ಸಂಶೋಧನಾ ಕೇಂದ್ರಗಳು ಹಾಗೂ ಎಂಜಿನಿಯರಿಂಗ್ ಕಾಲೇಜುಗಳು ಜೀವ ತುಂಬಲು ಸಹಾಯಕವಾಗುತ್ತಿವೆ ಎಂದು ಸಮೀಕ್ಷೆಯ ವರದಿಯಲ್ಲಿ ತಿಳಿಸಲಾಗಿದೆ.

ಏಷ್ಯಾದಲ್ಲೇ ಅತಿ ಹೆಚ್ಚು ಸಂಖ್ಯೆಯ ನವೋದ್ಯಮಗಳು ಬೆಂಗಳೂರಿನಲ್ಲಿವೆ. ಹಾಗಾಗಿ ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶವನ್ನು ಈ ನಗರದಿಂದ ನಿರೀಕ್ಷಿಸಬಹುದಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯದಲ್ಲಿ 8,763 ನವೋದ್ಯಮಗಳು ಕರ್ನಾಟಕ ಸ್ಟಾರ್ಟ್‌ ಅಪ್ ಘಟಕದಲ್ಲಿ ನೋಂದಣಿಯಾಗಿವೆ. ರಾಜ್ಯದ ನವೋದ್ಯಮದ ನೀತಿಯ ಪ್ರಕಾರ2020ರ ಅಂತ್ಯದ ವೇಳೆಗೆ ರಾಜ್ಯದಲ್ಲಿ 20 ಸಾವಿರ ತಂತ್ರಜ್ಞಾನ ಆಧಾರಿತ ಉದ್ಯಮಗಳು ತಲೆಯೆತ್ತಲಿವೆ. ಇದರಿಂದಾಗಿ ನವೋದ್ಯಮದಲ್ಲಿ 6 ಲಕ್ಷ ನೇರ ಹಾಗೂ 12 ಲಕ್ಷ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT