ಸೋಮವಾರ, ಆಗಸ್ಟ್ 26, 2019
27 °C

ಸ್ವಾತಂತ್ರ್ಯ ದಿನ: ಆಯುಕ್ತರ ಸುತ್ತೋಲೆಗೆ ಆಕ್ಷೇಪ

Published:
Updated:

ಬೆಂಗಳೂರು: ಆಗಸ್ಟ್‌ 15ರಂದು ಯಾವುದೇ ಶಾಲೆಗೆ ರಜೆ ನೀಡದೆ, ಎಲ್ಲ ಶಾಲೆಗಳಲ್ಲಿ ಸ್ವಾತಂತ್ರ್ಯ ದಿನವನ್ನು ಕಡ್ಡಾಯವಾಗಿ ವಿಜೃಂಭಣೆಯಿಂದ ಆಚರಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಭೀಕರ ನೆರೆ ಹಾನಿ ಸಂಭವಿಸಿರುವಾಗ ವಿಜೃಂಭಣೆಯಿಂದ ಆಚರಣೆ ಮಾಡಬೇಕು ಎಂದು ಸೂಚಿಸುವುದು ತಪ್ಪು. ಸರಳವಾಗಿ ಆಚರಿಸಿ, ಉಳಿತಾಯವಾಗುವ ಹಣವನ್ನು ನೆರೆ ಪರಿಹಾರಕ್ಕೆ ನೀಡುವ ವ್ಯವಸ್ಥೆ ಮಾಡಿದರೆ ಅದು ಮಾದರಿ ಆಚರಣೆಯಾಗುತ್ತದೆ ಎಂದು ‘ಕಾಮ್ಸ್‌’ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್‌ ಅವರು ಸಲಹೆ ನೀಡಿದ್ದಾರೆ.

Post Comments (+)