ಇಂದಿರಾ ಕ್ಯಾಂಟೀನ್‌ ₹146 ಕೋಟಿ ಬಾಕಿ

7

ಇಂದಿರಾ ಕ್ಯಾಂಟೀನ್‌ ₹146 ಕೋಟಿ ಬಾಕಿ

Published:
Updated:

ಬೆಂಗಳೂರು: ಇಂದಿರಾ ಕ್ಯಾಂಟೀನ್‌ ನಿರ್ವಹಣೆಗೆ ಸಂಬಂಧಿಸಿದಂತೆ ಬಿಬಿಎಂಪಿಗೆ ₹146 ಕೋಟಿ ಬಾಕಿ ಬರಬೇಕಿದೆ. ನಿಗದಿತ ಸಮಯಕ್ಕೆ ಅನುದಾನ ಬಾರದ ಕಾರಣ ಕ್ಯಾಂಟೀನ್‌ ಗುತ್ತಿಗೆದಾರರಿಗೆ ಹಣ ಪಾವತಿಸುವುದು ಕಷ್ಟವಾಗುತ್ತಿದೆ ಎಂದು ಪಾಲಿಕೆ ಮೂಲಗಳು ಹೇಳಿವೆ.

2016ರ ಆಗಸ್ಟ್‌ನಿಂದ ಈವರೆಗೆ ಸರ್ಕಾರದಿಂದ ಬಿಬಿಎಂಪಿಗೆ ಒಟ್ಟು ₹ 245 ಕೋಟಿ ಅನುದಾನ ಸರ್ಕಾರದಿಂದ ಬರಬೇಕಿತ್ತು. ಈ ಪೈಕಿ ₹ 100 ಕೋಟಿಯನ್ನು ಆರಂಭಿಕ ಬಂಡವಾಳವಾಗಿ ನೀಡಲಾಗಿತ್ತು. ಕೆಲಕಾಲದ ಬಳಿಕ ₹ 36.25 ಕೋಟಿ ನೀಡಲಾಯಿತು. ಇನ್ನೂ ₹ 146.75 ಕೋಟಿ ಬಾಕಿ ಇದೆ. 

ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಸುವ ಗುತ್ತಿಗೆದಾರರಿಗೆ ಪ್ರತಿ ವ್ಯಕ್ತಿಯ ದಿನದ ಆಹಾರಕ್ಕೆ (ಒಂದು ಬಾರಿ ತಿಂಡಿ, ಎರಡು ಬಾರಿ ಊಟ) ಗರಿಷ್ಠ ₹ 57ರವರೆಗೆ ದರ ನಿಗದಿಪಡಿಸಲಾಗಿದೆ. ಈ ಪೈಕಿ ಗ್ರಾಹಕರಿಂದ ₹ 25 ಪಡೆಯಲಾಗುತ್ತದೆ. ವ್ಯತ್ಯಾಸದ ಮೊತ್ತದ ಪೈಕಿ ಶೇ 70ರಷ್ಟು ಮೊತ್ತವನ್ನು ಪಾಲಿಕೆ ಹಾಗೂ ಶೇ 30ರಷ್ಟು ಮೊತ್ತವನ್ನು ಕಾರ್ಮಿಕ ಇಲಾಖೆ ಪಾವತಿಸುತ್ತದೆ.  

ಆದರೆ, ಇಲ್ಲಿ ನಿಯಮ ಪ್ರಕಾರ ಅನುದಾನ ಬಿಡುಗಡೆ ಆಗದ ಕಾರಣ ಪಾಲಿಕೆಗೆ ಸಂಕಟ ಎದುರಾಗಿದೆ. ಇಲ್ಲಿ ಮಾತ್ರವಲ್ಲ, ರಾಜ್ಯದ ಇತರ ಪಾಲಿಕೆಗಳ ಸ್ಥಿತಿಯೂ ಭಿನ್ನವಲ್ಲ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಹೇಳಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 1

  Frustrated
 • 6

  Angry

Comments:

0 comments

Write the first review for this !