ಆರು ಸಾಧಕರಿಗೆ ಇನ್ಫೊಸಿಸ್‌ ಪ್ರಶಸ್ತಿ

7

ಆರು ಸಾಧಕರಿಗೆ ಇನ್ಫೊಸಿಸ್‌ ಪ್ರಶಸ್ತಿ

Published:
Updated:
Prajavani

ಬೆಂಗಳೂರು: ಇನ್ಫೋಸಿಸ್ ವಿಜ್ಞಾನ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ಇನ್ಫೊಸಿಸ್‌ ಪ್ರೈಸ್‌ –2018 ಪ್ರಶಸ್ತಿ ಪ್ರದಾನ ಸಮಾರಂಭ ನಗರದಲ್ಲಿ ಶನಿವಾರ ನಡೆಯಿತು. 

6 ಕ್ಷೇತ್ರಗಳ ಸಾಧಕರಿಗೆ ತಲಾ ₹1ಲಕ್ಷ ಅಮೆರಿಕನ್‌ ಡಾಲರ್‌ ನಗದು ಬಹುಮಾನ ಮತ್ತು ಚಿನ್ನದ ಪದಕವನ್ನು ಪ್ರಿನ್ಸ್‌ಟನ್‌ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮಂಜುಳ್‌ ಭಾರ್ಗವ ಪ್ರದಾನ ಮಾಡಿದರು.

ಪ್ರಶಸ್ತಿ ವಿಜೇತರು: ಎಂಜಿನಿಯರಿಂಗ್‌ ಮತ್ತು ಕಂಪ್ಯೂಟರ್‌ ವಿಜ್ಞಾನ: ನವಕಾಂತ ಭಟ್ (ಸೆಂಟರ್ ಫಾರ್ ನ್ಯಾನೋ ಸೈನ್ಸ್ ಆಂಡ್ ಎಂಜಿನಿಯರಿಂಗ್ ಮುಖ್ಯಸ್ಥ, ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರು.) ಜೈವಿಕ ರಸಾಯನಶಾಸ್ತ್ರದಲ್ಲಿ ಹೊಸ ಬಗೆಯ ಬಯೋಸೆನ್ಸರ್‌ಗಳ ವಿನ್ಯಾಸ ಮಾಡಿದ್ದು. 

ಮಾನವಿಕ ವಿಭಾಗ: ಕವಿತಾ ಸಿಂಗ್‌ (ನವದೆಹಲಿಯ ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯ) ಮೊಘಲ್, ರಜಪೂತ ಹಾಗೂ ಡೆಕ್ಕನ್ ಕಲೆಗಳ ಕುರಿತ ಅಧ್ಯಯನ, ಮ್ಯೂಸಿಯಂಗಳ ಐತಿಹಾಸಿಕ ಕಾರ್ಯಕ್ಷಮತೆ ಹಾಗೂ ಅವುಗಳ ಪಾತ್ರ ಮತ್ತು ಪ್ರಾಮುಖ್ಯತೆ ಕುರಿತ ಬರವಣಿಗೆಗಾಗಿ‌.

ಜೀವ ವಿಜ್ಞಾನ: ರೂಪ್ ಮಲಿಕ್‌ (ಟಾಟಾ ಇನ್ಸ್‌ಟಿಟ್ಯೂಟ್‌ ಆಫ್ ಫಂಡಮೆಂಟಲ್ ರಿಸರ್ಚ್, ಮುಂಬೈ) ಮಾಲಿಕ್ಯುಲರ್‌ ಮೋಟರ್ ಪ್ರೊಟೀನ್‌ಗಳ ಕುರಿತಾದ ಅಧ್ಯಯನಕ್ಕಾಗಿ.

ಗಣಿತ ವಿಜ್ಞಾನ: ನಳಿನಿ ಅನಂತರಾಮನ್, (ಫ್ರಾನ್ಸ್‌ನ ಸ್ಟ್ರಾಸ್ ಬರ್ಗ್ ವಿಶ್ವವಿದ್ಯಾಲಯ) ಕ್ವಾಂಟಮ್ ಚಾವೋಸ್ ವಿಚಾರದಲ್ಲಿ ನಡೆಸಿದ ಅಧ್ಯಯನಕ್ಕಾಗಿ.

ಶಾರೀರಿಕ ವಿಜ್ಞಾನ: ಎಸ್.ಕೆ. ಸತೀಶ್, (ದೇವೇಚಾ ಸೆಂಟರ್ ಫಾರ್ ಕ್ಲೈಮೇಟ್ ಚೇಂಜ್‌ನ ನಿರ್ದೇಶಕ) ಹವಾಮಾನ ವೈಪರೀತ್ಯ ಕ್ಷೇತ್ರದಲ್ಲಿ ನಡೆಸಿದ ವೈಜ್ಞಾನಿಕ ಅಧ್ಯಯನ. ಬ್ಲ್ಯಾಕ್ ಕಾರ್ಬನ್ ಏರೋಸೋಲ್ಸ್ ಬಗ್ಗೆ ಅಧ್ಯಯನ.

ಸಮಾಜ ವಿಜ್ಞಾನ: ಸೆಂಧಿಲ್ ಮುಳ್ಳೈನಾಥನ್, (ಷಿಕಾಗೊ ವಿಶ್ವವಿದ್ಯಾಲಯ) ನಡವಳಿಕೆಗೆ ಸಂಬಂಧಿಸಿದ ಅರ್ಥಶಾಸ್ತ್ರ ಕುರಿತ ಸಾಧನೆಗಾಗಿ.

ಅಪೌಷ್ಟಿಕತೆ ನಿವಾರಣೆ ಕುರಿತು ತಂತ್ರಜ್ಞಾನ ರೂಪಿಸಿದ ವಿದ್ಯಾರ್ಥಿಗಳ ತಂಡಕ್ಕೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ತಂಡಕ್ಕೆ 5 ಲಕ್ಷ ವಿದ್ಯಾರ್ಥಿ ವೇತನ, ರಾಕೆಟ್‌ ಉಡಾವಣೆ ಸಂದರ್ಭದಲ್ಲಿ ಶ್ರೀಹರಿಕೋಟಾದಲ್ಲಿನ ಇಸ್ರೋ ಕೇಂದ್ರಕ್ಕೆ ಭೇಟಿ ನೀಡುವ ಅವಕಾಶ,‘ನ್ಯಾಸ್‌’ ಸಂಸ್ಥೆಯ ಜ್ಯೂನಿಯರ್‌ ಅಕಾಡೆಮಿಯ ಸದಸ್ಯತ್ವ ಘೋಷಿಸಲಾಯಿತು. 

ವಿದ್ಯಾರ್ಥಿಗಳು ಮಾಡಿದ್ದೇನು?:

ಅರ್ಣಬ್‌, ಸುಮಿತ್‌, ಆರ್ಜೂ ಅವರ ತಂಡ ನ್ಯೂಟ್ರಿ ಆ್ಯಪ್‌ ಸಿದ್ಧಪಡಿಸಿದೆ. ಐದು ವರ್ಷದೊಳಗಿನ ಮಗುವಿನ ತಾಯಂದಿರಿಗೆ ಸಾರ್ವಜನಿಕ ಪಡಿತರ ವ್ಯವಸ್ಥೆ ಸರಿಯಾಗಿ ಸಿಗುವಂತಾಗಲು ಈ ಆ್ಯಪ್‌ ಕಾರ್ಯನಿರ್ವಹಿಸಲಿದೆ. 

ಇನ್ನೊಂದು ತಂಡ ಅರುಣಿಮಾ ಎಸ್‌., ಕೇಶವ ಡಿ.ಕೆ, ಲೀಲಾ ಜೆ, ಪ್ರಥ್ವಿ ಎಸ್‌ ಮತ್ತು ಸಂದೀಪ್‌ ಆರ್‌. ಅವರದ್ದು. ಅಂಗನವಾಡಿಗಳಲ್ಲಿ ಅಡುಗೆ ತಯಾರಿಕೆಗೆ ಬಳಸುವ ನೀರಿಗೆ ಪೋಷಕಾಂಶ, ಖನಿಜಾಂಶಗಳನ್ನು ಬೆರೆಸಿ ಪೂರೈಸುವ ಯೋಜನೆಯೊಂದನ್ನು ಈ ತಂಡ ಪರಿಚಯಿಸಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ನೀರನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಿ ಅಪೌಷ್ಟಿಕತೆ ಸಮಸ್ಯೆಯುಳ್ಳ ಪ್ರದೇಶಗಳಿಗೆ ಪೂರೈಸಬಹುದು ಎಂದು ಈ ತಂಡ ಸಲಹೆ ಮಾಡಿದೆ. 

ವಿಜ್ಞಾನ ಪ್ರತಿಷ್ಠಾನದ ಅಧ್ಯಕ್ಷ ಕೆ. ದಿನೇಶ್, ಟ್ರಸ್ಟಿಗಳಾದ ಎನ್.ಆರ್.ನಾರಾಯಣಮೂರ್ತಿ, ಟಿ.ವಿ. ಮೋಹನ್ ದಾಸ್ ಪೈ, ಎಸ್. ಗೋಪಾಲಕೃಷ್ಣನ್, ಎಸ್.ಡಿ. ಶಿಬುಲಾಲ್, ಶ್ರೀನಾಥ್ ಬಾಟ್ನಿ ಇದ್ದರು.

ಬರಹ ಇಷ್ಟವಾಯಿತೆ?

 • 17

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !