‘ಇನ್‌ಸ್ಟ್ರಾಗ್ರಾಂ’ ಸ್ನೇಹಿತ ಜೈಲುಪಾಲು

7
ಪೋಕ್ಸೊ ಕಾಯ್ದೆಯಡಿ ಪ್ರಕರಣ; ಶಿವಾಜಿನಗರ ಪೊಲೀಸರ ಕಾರ್ಯಾಚರಣೆ

‘ಇನ್‌ಸ್ಟ್ರಾಗ್ರಾಂ’ ಸ್ನೇಹಿತ ಜೈಲುಪಾಲು

Published:
Updated:

ಬೆಂಗಳೂರು: ‘ಇನ್‌ಸ್ಟ್ರಾಗ್ರಾಂ’ ಆ್ಯಪ್‌ ಮೂಲಕ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯನ್ನು ಪರಿಚಯ ಮಾಡಿಕೊಂಡು, ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಡಿ ಮುಂಬೈನ ಚಿರಾಗ್ ಠಾಕೇರ್ (37) ಎಂಬಾತನನ್ನು ಶಿವಾಜಿನಗರ ಪೊಲೀಸರು ಬಂಧಿಸಿದ್ದಾರೆ.

ಮುಂಬೈನಲ್ಲಿ ಕಿರಾಣಿ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ಚಿರಾಗ್, 2017ರ ಡಿಸೆಂಬರ್‌ನಲ್ಲಿ ವಿದ್ಯಾರ್ಥಿನಿಯನ್ನು ಪರಿಚಯ ಮಾಡಿಕೊಂಡಿದ್ದ. ಕೆಲ ದಿನಗಳ ಚಾಟಿಂಗ್ ಬಳಿಕ ಅವರಿಬ್ಬರೂ ಸ್ನೇಹಿತರಾಗಿದ್ದರು. ನಂತರ ಆರೋಪಿ, ಬಾಲಕಿಯ ಮಾರ್ಫಿಂಗ್ (ಅಶ್ಲೀಲವಾಗಿ ಚಿತ್ರಿಸಿ) ಫೋಟೊಗಳನ್ನು ಕಳುಹಿಸಲಾರಂಭಿಸಿದ್ದ. ಅದನ್ನು ಪ್ರಶ್ನಿಸುತ್ತಿದ್ದಂತೆ, ಜೀವ ಬೆದರಿಕೆ ಸಹ ಹಾಕಿದ್ದ ಎಂದು ಪೊಲೀಸರು ಹೇಳಿದ್ದಾರೆ.

ತಿಂಗಳ ಹಿಂದೆ ಬೆಂಗಳೂರಿಗೂ ಬಂದಿದ್ದ ಆರೋಪಿ, ಕಾಲೇಜಿನ ಬಳಿಯೂ ಹೋಗಿ ಆಕೆಗೆ ಕಿರುಕುಳ ನೀಡಿದ್ದ. ಆ ವಿಷಯವನ್ನು ವಿದ್ಯಾರ್ಥಿನಿ ಪೋಷಕರಿಗೆ ತಿಳಿಸಿದ್ದಳು. ಆ ನಂತರ ಪ್ರಕರಣ ಠಾಣೆಯ ಮೆಟ್ಟಿಲೇರಿತ್ತು. ತನಿಖೆಗ ಕೈಗೆತ್ತಿಕೊಂಡ ಪೊಲೀಸರು, ಮೊಬೈಲ್ ಕರೆ ವಿವರ ಆಧರಿಸಿ ಮುಂಬೈಗೆ ತೆರಳಿ ಆರೋಪಿಯನ್ನು ಬಂಧಿಸಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !