ಫೇಸ್‌ಬುಕ್‌ನಲ್ಲಿ ಐಪಿಎಲ್ ಟಿಕೆಟ್ ಮಾರಾಟ!

ಶನಿವಾರ, ಏಪ್ರಿಲ್ 20, 2019
26 °C

ಫೇಸ್‌ಬುಕ್‌ನಲ್ಲಿ ಐಪಿಎಲ್ ಟಿಕೆಟ್ ಮಾರಾಟ!

Published:
Updated:
Prajavani

ಬೆಂಗಳೂರು: ಆನ್‌ಲೈನ್‌ನಲ್ಲಿ ಐಪಿಎಲ್ ಟಿಕೆಟ್‌ಗಳನ್ನು ಖರೀದಿಸಿ ಸಾಮಾಜಿಕ ಜಾಲತಾಣಗಳ ಮೂಲಕ ಅವುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ದೀಪಕ್ ಕೂಲ್ (28) ಎಂಬ ಬಟ್ಟೆ ವ್ಯಾಪಾರಿಯನ್ನು ಬುಧವಾರ ಬಂಧಿಸಿದ ಕಬ್ಬನ್‌ಪಾರ್ಕ್ ಪೊಲೀಸರು, ನಂತರ ಜಾಮೀನಿನ ಮೇಲೆ ಬಿಟ್ಟು ಕಳುಹಿಸಿದ್ದಾರೆ.

ವಿಜಯನಗರ ನಿವಾಸಿಯಾದ ದೀಪಕ್, ₹ 1,925 ಹಾಗೂ ₹2,750ರ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಖರೀದಿ ಮಾಡುತ್ತಿದ್ದ. ನಂತರ ಟಿಕೆಟ್‌ಗಳ ಫೋಟೊವನ್ನು ಫೇಸ್‌ಬುಕ್ ಹಾಗೂ ಟ್ವಿಟರ್‌ನಲ್ಲಿ ಹಾಕಿ, ‘₹ 3,500 ಹಾಗೂ ₹ 3,800ಕ್ಕೆ ನನ್ನ ಬಳಿ ಟಿಕೆಟ್‌ಗಳು ಸಿಗುತ್ತವೆ’ ಎಂದು ಪೋಸ್ಟ್ ಹಾಕುತ್ತಿದ್ದ.

ಆ ‍ಪೋಸ್ಟ್ ನೋಡಿ ಸಂಪರ್ಕಿಸುತ್ತಿದ್ದ ಗ್ರಾಹಕರಿಂದ ತನ್ನ ಖಾತೆಗೆ ಹಣ ಹಾಕಿಸಿಕೊಂಡು, ಟಿಕೆಟ್‌ಗಳನ್ನು ಮೇಲ್‌ನಲ್ಲಿ ಕಳುಹಿಸುತ್ತಿದ್ದ. ಕರ್ನಾಟಕ ‍ಪೊಲೀಸ್ ಕಾಯ್ದೆ ಪ್ರಕಾರ ಟಿಕೆಟ್‌ಗಳನ್ನು ಹೆಚ್ಚಿನ ಬೆಲೆಗೆ ಮಾರುವುದು ಅಪರಾಧ. ಈತನ ವಿರುದ್ಧ ಬಿ.ಆರ್.ಸುಜಯ್ ಎಂಬುವರು ದೂರು ಕೊಟ್ಟಿದ್ದರು ಎಂದು ಕಬ್ಬನ್‌ಪಾರ್ಕ್‌ ಪೊಲೀಸರು ಮಾಹಿತಿ ನೀಡಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !