ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕಾಡೆಮಿಗಳು ವಾಣಿಜ್ಯ ಸಂಸ್ಥೆಗಳಲ್ಲ: ಜೆ. ಲೋಕೇಶ್

ಅವಧಿಗೆ ಮುನ್ನ ಅಧ್ಯಕ್ಷರ ಬದಲಾವಣೆ: ಯೋಜನೆಗಳಿಗೆ ಅಡ್ಡಿ
Last Updated 1 ಸೆಪ್ಟೆಂಬರ್ 2019, 19:27 IST
ಅಕ್ಷರ ಗಾತ್ರ

ಬೆಂಗಳೂರು: ‘ವಾಣಿಜ್ಯ ಸಂಸ್ಥೆಗಳ ರೀತಿಯಲ್ಲಿ,ಸಾಂಸ್ಕೃತಿಕ ಅಕಾಡೆಮಿಗಳ ಅಧ್ಯಕ್ಷರನ್ನು ಅವಧಿಗೂ ಮುನ್ನ ಬದ
ಲಾಯಿಸುವುದರಿಂದ ಯೋಜನೆಗಳು ಅಪೂರ್ಣವಾಗುವ ಸಾಧ್ಯತೆಗಳಿವೆ. ಈಗಾಗಲೇ ಜಾರಿಯಲ್ಲಿರುವ ಯೋಜನೆ
ಗಳನ್ನು ಮುಂದುವರೆಸುವ ಜತೆಗೆ ಸಾಂಸ್ಕೃತಿಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಆರಂಭಿಸಿ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಅವರಿಗೆಕರ್ನಾಟಕ ನಾಟಕ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಜೆ. ಲೋಕೇಶ್ ಮನವಿ ಮಾಡಿದ್ದಾರೆ.

ಸಚಿವರಿಗೆ ಪತ್ರ ಬರೆದಿರುವ ಲೋಕೇಶ್, ‘ನಾಟಕ ಅಕಾಡೆಮಿಯು ರಂಗಭೂಮಿಯ ಇತಿಹಾಸದ ದಾಖಲೆಗಳನ್ನು ಡಿಜಿಟಲೀಕರಣ ಪ್ರಕ್ರಿಯೆ ಜಾರಿಯಲ್ಲಿದ್ದು, 80ಕ್ಕೂ ಹೆಚ್ಚು ಸಾಕ್ಷ್ಯಚಿತ್ರ, 550ಕ್ಕೂ ಅಧಿಕ ವೃತ್ತಿ ರಂಗಭೂಮಿ ನಾಟಕಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ’ ಎಂದಿದ್ದಾರೆ.

‘ಭರತನ ನಾಟ್ಯಶಾಸ್ತ್ರವನ್ನು ಸಂಸ್ಕೃತದಿಂದ ಕನ್ನಡಕ್ಕೆ ಭಾಷಾಂತರಿಸಲಾಗಿದ್ದು, ಮುದ್ರಣಕ್ಕೆ ಸಿದ್ಧವಾಗಿದೆ. ಕರ್ನಾಟಕ ರಂಗಮಂದಿರ ಪ್ರಾಧಿಕಾರ ಸ್ಥಾಪಿಸಲು ರೂಪುರೇಷೆಯನ್ನು ಸಿದ್ಧಗೊಳಿಸಿ, ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಲಾಗಿದೆ. ತಾವು ಈ ಯೋಜನೆಗೆ ಹಸಿರು ನಿಶಾನೆ ನೀಡಿ, ಪ್ರಾಧಿಕಾರ ಸ್ಥಾಪಿಸಬೇಕೆಂದು ಆಗ್ರಹಿಸಿದ್ದಾರೆ.

‘ನೀನಾಸಂ, ಸಾಣೇಹಳ್ಳಿ ಹಾಗೂ ವಿವಿಧ ವಿ.ವಿಗಳಿಂದ ಪದವಿ ಪಡೆದ3,000ಕ್ಕೂ ಅಧಿಕ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಇವರನ್ನು ಪ್ರೌಢಶಾಲೆಯಲ್ಲಿ ನಾಟಕ ಶಿಕ್ಷಕರನ್ನಾಗಿ ನೇಮಿಸಿಕೊಳ್ಳಬೇಕು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT