ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಗಂಗೆ ತೋಪಿನ ಮರಿಹೊನ್ನಮ್ಮ ಜಾತ್ರೆ

Last Updated 24 ಮೇ 2019, 19:31 IST
ಅಕ್ಷರ ಗಾತ್ರ

ದಾಬಸ್‌ಪೇಟೆ: ಕಣಗಿಲೆ, ಮಲ್ಲಿಗೆ, ಗುಲಾಬಿ, ಸೇವಂತಿಗೆ, ಕನಕಾಂಬರ, ತುಳಸಿ ಹೂಗಳು, ನಿಂಬೆಹಣ್ಣುಗಳ ಹಾರ, ಹಸಿರು ಬಳೆಗಳ ಗೊಂಚಲು, ಹೊಂಬಾಳೆ, ಹಸಿರು ಸೀರೆಯಿಂದ ಕಂಗೊಳಿಸುತ್ತಿದ್ದ ದೇವಿಯ ಮೂರ್ತಿ. ಸಾವಿರಾರು ಭಕ್ತರ ಕಲರವ, ಭಕ್ತಿಯ ಭಾವುಕತೆ ಶಿವಗಂಗೆ ತೋಪಿನ ಮರಿಹೊನ್ನಮ್ಮ ಜಾತ್ರೆಯಲ್ಲಿ ಸೊಬಗು ಮೇಳೈಸುವಂತೆ ಮಾಡಿತ್ತು.

ದೇವಾಲಯದ ಮುಂದೆ ಕೊಂಡ ಹಾಕಲಾಗಿತ್ತು. ಶಿವಗಂಗೆ, ಹೊಸಪಾಳ್ಯ ಹಾಗೂ ಅಕ್ಕಪಕ್ಕದ ಗ್ರಾಮಗಳ ಜನರು ತಂಬಿಟ್ಟಿನ ಆರತಿ ಮಾಡಿಕೊಂಡು ಬಂದು ಕೊಂಡದ ಮೂಲಕ ಹಾದುಹೋಗಿ ದೇವಿಗೆ ಬೆಳಗಿದರು.

ಅಲಂಕೃತ ದೇವಿಯನ್ನು ರಥದಲ್ಲಿ ಕೂರಿಸಿ ಮಂಗಳ ವಾದ್ಯದ ಮೇಳದೊಂದಿಗೆ ಎಳೆಯಲಾಯಿತು. ಹೊಸಪಾಳ್ಯ, ಬರಗೇನಹಳ್ಳಿ, ಮಾಚನಹಳ್ಳಿ, ಗೊಟ್ಟಿಕೆರೆ, ಕಂಬಾಳು, ಶಿವಗಂಗೆ ಗ್ರಾಮಗಳ ಕುರ್ಚುಗಳನ್ನು ದೇವಾಲಯದ ಸುತ್ತಲು ಪ್ರದಕ್ಷಿಣೆ ಹಾಕಿಸುವಾಗ ಭಕ್ತರು ಹರ್ಷೋದ್ಗಾರ ಮಾಡಿದರು.

ಮರಿಹೊನ್ನಮ್ಮ ದೇವಿಗೆ ಭಕ್ತರು ಶ್ರದ್ಧಾಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಮದುವೆ, ಗೃಹಪ್ರವೇಶ, ನಾಮಕರಣ, ನಿವೇಶನ ಕೊಳ್ಳುವಿಕೆ ಹೀಗೆ ಅನೇಕ ಶುಭ ಕಾರ್ಯಗಳು ಸುಸೂತ್ರವಾಗಿ ನಡೆಯಲಿ ಎಂದು ದೇವಿಗೆ ಪೂಜೆ ಸಲ್ಲಿಸುವುದು ವಾಡಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT