‘ಮುಷ್ಕರಕ್ಕೆ ಸಾರ್ವಜನಿಕರು ಬೆಂಬಲಿಸಿ’

7

‘ಮುಷ್ಕರಕ್ಕೆ ಸಾರ್ವಜನಿಕರು ಬೆಂಬಲಿಸಿ’

Published:
Updated:

ಬೆಂಗಳೂರು: ಕೇಂದ್ರ ಸರ್ಕಾರದ ಕಾರ್ಮಿಕ, ರೈತ ವಿರೋಧಿ ನೀತಿಗಳನ್ನು ಖಂಡಿಸಿ ದೇಶದಾದ್ಯಂತ ಜ.8 ಮತ್ತು 9ರಂದು ವಿವಿಧ ಕಾರ್ಮಿಕ ಸಂಘಟನೆಗಳು ನೀಡಿರುವ ಮುಷ್ಕರಕ್ಕೆ ಸಾರ್ವಜನಿಕರು ಬೆಂಬಲಿಸಬೇಕು ಎಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಮನವಿ ಮಾಡಿತು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸಂಚಾಲಕ ವಿಜಯ್‌ ಭಾಸ್ಕರ್‌, ‘ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ಮತ್ತು ಮಾಜಿ ಪ್ರಧಾನಿ ದೇವೇಗೌಡ ಅವರೂ ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ ಎಲ್ಲಾ ಕಾರ್ಮಿಕ ಸಂಘಟನೆಗಳು ಹೋರಾಟಕ್ಕೆ ಸಹಮತ ವ್ಯಕ್ತಪಡಿಸಿವೆ’ ಎಂದರು.

ಬೆಂಬಿಲಿಸಿರುವ ಸಂಘಟನೆಗಳು: ಬಿಎಸ್‌ಎನ್‌ಎಲ್, ಬ್ಯಾಂಕ್, ಕೆಎಸ್‌ಆರ್‌ಟಿಸಿ, ಬಿಟಿಎಸ್, ಆಟೊ, ಕೈಗಾರಿಕಾ, ಅಂಗನವಾಡಿ, ಆಶಾ, ಬಿಸಿಯೂಟ, ಗ್ರಾಮ ಪಂಚಾಯಿತಿ, ಬೀಡಿ, ಪ್ಲಾಂಟೇಶನ್ ಕಟ್ಟಡ, ಗಾರ್ಮೆಂಟ್ಸ್ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿವೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !