ಭಾನುವಾರ, ಅಕ್ಟೋಬರ್ 20, 2019
21 °C
18 ರಿಂದ 21ರ ವರೆಗೆ ಆಭರಣಗಳ ಮೇಳ

‘ಜುವೆಲ್ಸ್ ಆಫ್ ಇಂಡಿಯಾ’ ಆಭರಣ ಪ್ರದರ್ಶನ

Published:
Updated:
Prajavani

ಬೆಂಗಳೂರು: ನಗರದ ಸೇಂಟ್ ಜೋಸೆಫ್ಸ್ ಇಂಡಿಯನ್ ಹೈಸ್ಕೂಲ್ ಮೈದಾನದಲ್ಲಿ ಅ.18 ರಿಂದ 21ರವರೆಗೆ ದೇಶದ ಅತಿ ದೊಡ್ಡ ಆಭರಣ ಪ್ರದರ್ಶನ ಮತ್ತು ಮಾರಾಟ ಮೇಳ ‘ಜುವೆಲ್ಸ್ ಆಫ್ ಇಂಡಿಯಾ’ ನಡೆಯಲಿದೆ.

ಒಂದೇ ವೇದಿಕೆಯಡಿ ನಾನಾ ಭಾಗಗಳ 100ಕ್ಕೂ ಹೆಚ್ಚು ಜ್ಯುವೆಲರಿಗಳ ಆಭರಣಗಳನ್ನು ಈ ಮೇಳದಲ್ಲಿ ವೀಕ್ಷಿಸಿ, ಖರೀದಿಸಬಹು
ದಾಗಿದೆ. ಈ ಬಾರಿಯ ಮೇಳಕ್ಕೆ ಬಹುಭಾಷಾ ನಟಿ ಪ್ರಣಿತಾ ಸುಭಾಷ್ ರಾಯಭಾರಿಯಾಗಿ ಆಯ್ಕೆ ಆಗಿದ್ದಾರೆ. 

‘ಒಂದೇ ಕಡೆ ವೈವಿಧ್ಯಮಯ ಆಭರಣಗಳು ಕಾಣಸಿಗಲಿವೆ. ಗ್ರಾಹಕರಿಗೆ ತಮ್ಮ ಅಭಿರುಚಿ ಹಾಗೂ ಬಜೆಟ್‌ಗೆ ಹೊಂದುವ ಆಭರಣಗಳು ಇಲ್ಲಿ ಸಿಗುತ್ತವೆ. ಹಬ್ಬದ ಋತುವಿನಲ್ಲಿ ಒಡವೆ ಖರೀದಿಸಲು ಇದು ಉತ್ತಮ ಅವಕಾಶ’ ಎಂದು ಪ್ರಣಿತಾ ತಿಳಿಸಿದ್ದಾರೆ. 

ಮೇಳದ ಸಂಚಾಲಕ ಸಂದೀಪ್‌ ಬೇಕಲ್‌, ‘ರಾಜ್ಯದ ಜನತೆಯ ಅಭಿರುಚಿಗೆ ಅನುಗುಣವಾದ ಒಡವೆಗಳು ಇಲ್ಲಿರಲಿವೆ. ಜಿಆರ್‌ಟಿ, ಭೀಮಾ, ಜೋಯ್‌ ಅಲುಕ್ಯಾಸ್, ಆಭರಣ, ಶ್ರೀ ಗಣೇಶ ಡೈಮಂಡ್ಸ್, ಪಂಚ ಕೇಸರಿ, ಎಂ.ಪಿ. ಸ್ವರ್ಣ ಮಹಲ್, ಕ್ರಿಯೇಷನ್ಸ್ ಜ್ಯುವೆಲರಿ, ಪಿಎಂಜೆ ಜ್ಯುವೆಲ್ಸ್ ಸೇರಿದಂತೆ ವಿವಿಧ ಆಭರಣ ಮಳಿಗೆಯಲ್ಲಿ ಸಿಗುವ ಇತ್ತೀಚಿನ ಸಂಗ್ರಹಗಳನ್ನು ಒಂದೇ ಸೂರಿನಡಿ ಪ್ರದರ್ಶಿಸಲಾಗುತ್ತದೆ. ಅದೇ ರೀತಿ, ಮುಂಬೈ, ದೆಹಲಿ, ಜೈಪುರ, ಕೋಲ್ಕತ್ತ, ಪುಣೆ ಸೇರಿದಂತೆ ವಿವಿಧ ಕಡೆಗಳ ಆಭರಣಗಳು ಮೇಳದಲ್ಲಿರಲಿವೆ’ ಎಂದು ಮಾಹಿತಿ ನೀಡಿದರು.

Post Comments (+)