ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನಸಿ ಪದಾರ್ಥ ‘ಕಿಟ್’, ಸ್ವೆಟರ್‌ ವಿತರಣೆ

ಸಂತ್ರಸ್ತರಿಗೆ ‘ಜಿತೋ’ ನೆರವು
Last Updated 14 ಆಗಸ್ಟ್ 2019, 10:50 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯಲ್ಲಿ ಉಂಟಾದ ಪ್ರವಾಹದಿಂದ ಸಂತ್ರಸ್ತರಾದವರಿಗೆ ಜಿತೋ (ಜೈನ ಇಂಟರ್‌ನ್ಯಾಷನಲ್ ಟ್ರೇಡ್‌ ಅರ್ಗನೈಝೇಶನ್‌) ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನೆರವು ನೀಡಲಾಗುತ್ತಿದೆ’ ಎಂದು ಜಿತೋ ಯುವ ಘಟಕದ ಅಧ್ಯಕ್ಷ ಅಮಿತ ದೋಷಿ ತಿಳಿಸಿದರು.

‘ಆರಂಭದಲ್ಲಿ ಸಂತ್ರಸ್ತರಿಗೆ ಸಹಾಯ ಮಾಡುತ್ತಿದ್ದ ಸ್ವಯಂಸೇವಕರೊಂದಿಗೆ ಕೈಜೋಡಿಸಿದ್ದೆವು. ಆದರೆ, ಜನರ ಸಂಕಷ್ಟಗಳನ್ನು ನೋಡಿದಾಗ ಅವರಿಗೆ ಅಗತ್ಯ ವಸ್ತುಗಳನ್ನು ನೀಡಲೇಬೇಕೆಂಬ ಉದ್ದೇಶದಿಂದ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಲಾಯಿತು. ಒಂದೆರೆಡು ದಿನಗಳಲ್ಲೇ ಜನರು ಅನೇಕ ವಸ್ತುಗಳನ್ನು ನೀಡಿದರು’ ಎಂದರು.

‘ಹಿಂದವಾಡಿಯ ಮಹಾವೀರ ಭವನ ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡು ಕಾರ್ಯ ಆರಂಭಿಸಿದೆವು. ಜನರು ಸಾಕಷ್ಟು ಪ್ರಮಾಣದಲ್ಲಿ ಅಕ್ಕಿ, ಕುಡಿಯುವ ನೀರಿನ ಬಾಟಲಿಗಳು, ಬೇಳೆ ಕಾಳು, ಮಸಾಲೆ ಪದಾರ್ಥಗಳು, ಹೊಸ ಬಟ್ಟೆಗಳು ಮೊದಲಾದವುಗಳನ್ನು ತಂದುಕೊಟ್ಟರು. ಬಳಿಕ ಜಿಲ್ಲೆಯಲ್ಲಿ ಅಗತ್ಯವಿರುವ ಮತ್ತು ಹೆಚ್ಚಿನ ಸಂತ್ರಸ್ತರಿರುವ ಸ್ಥಳಗಳಿಗೆ ಈ ಎಲ್ಲ ವಸ್ತುಗಳನ್ನು ತಲುಪಿಸಲಾಯಿತು. ಆರ್‌ಎಸ್‌ಎಸ್‌, ಲಯನ್ಸ್‌ ಕ್ಲಬ್‌, ರೋಟರಿ ಕ್ಲಬ್ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಕೈಜೋಡಿಸಿದವು’ ಎಂದು ಹೇಳಿದರು.

‘10 ದಿನಗಳಲ್ಲಿ 12ರಿಂದ 15ಸಾವಿರ ಜನರಿಗೆ ಆಗುವಷ್ಟು ದಿನಸಿ ಸಾಮಾನುಗಳನ್ನು ವಿತರಿಸಲಾಗಿದೆ. ಎಲ್ಲ ಲೆಕ್ಕವನ್ನೂ ಇಡಲಾಗಿದೆ. ಈಗ, ಒಂದು ಕಿಟ್ ತಯಾರಿಸಲಾಗುತ್ತಿದ್ದು, ಇದರಲ್ಲಿ 5 ಕೆಜಿ ಅಕ್ಕಿ, 1 ಕೆಜಿ ಬೇಳೆಕಾಳು, ಸಾಂಬಾರು ಪದಾರ್ಧ, ಅಡುಗೆ ಎಣ್ಣೆ, ಟೂತ್‌ಪೇಸ್ಟ್‌, ಸಾಬೂನು ಇರುತ್ತದೆ. ಅದನ್ನು ಪ್ರವಾಹಪಡೀತ ಪ್ರದೇಶದ ಪ್ರತಿ ಕುಟುಂಬಕ್ಕೆ ವಿತರಿಸಲಾಗುತ್ತಿದೆ. ಎರಡು ದಿನಗಳಲ್ಲಿ 5ಸಾವಿರ ಸ್ಟೆಟರ್‌ಗಳನ್ನು ಹಂಚಿಕೆ ಮಾಡುವ ಗುರಿ ಇದೆ. ಸಹಕರಿಸಿದ ಸಂಘ–ಸಂಸ್ಥೆಗಳಿಗೆ ಹಾಗೂ ಸಹಾಯ ಹಸ್ತ ಚಾಚಿದವರಿಗೆ ಸಂಸ್ಥೆ ಋಣಿಯಾಗಿದೆ’ ಎಂದರು.

‘ಸಂಸ್ಥೆಯಿಂದ ಆ. 15ರಂದು ತಾಲ್ಲೂಕಿನ ಮಣ್ಣೂರದಲ್ಲಿ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಆರೋಗ್ಯ ತಪಾಸಣೆ ಶಿಬಿರವನ್ನು ಉಚಿತವಾಗಿ ಹಮ್ಮಿಕೊಳ್ಳಲಾಗಿದೆ. 18 ವೈದ್ಯರು ತಪಾಸಣೆ ನಡೆಸಲಿದ್ದಾರೆ’ ಎಂದು ಜಿತೋ ಬೆಳಗಾವಿ ವಿಭಾಗದ ಕಾರ್ಯದರ್ಶಿ ವಿಕ್ರಮ ಜೈನ ತಿಳಿಸಿದರು.

ಮುಖಂಡರಾದ ಮನೋಜ ಸಂಚೇತಿ, ಭಾರತಿ ಹರದಿ, ಅಕ್ಷಯ ಜಕ್ಕನ್ನವರ, ಅಮೋಘ ನಿಲಜಗಿ, ನಿವೇದಿತಾ ಅಂಕಲಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT