ಅಭ್ಯರ್ಥಿ–ಕೊಲಿಜಿಯಂ ಸಮಾಲೋಚನೆ ಅವಶ್ಯ

7
ನಿವೃತ್ತಿ ಬೀಳ್ಕೊಡುಗೆ ಪಡೆದ ನ್ಯಾಯಮೂರ್ತಿ ಎಚ್‌.ಜಿ.ರಮೇಶ್

ಅಭ್ಯರ್ಥಿ–ಕೊಲಿಜಿಯಂ ಸಮಾಲೋಚನೆ ಅವಶ್ಯ

Published:
Updated:
Prajavani

ಬೆಂಗಳೂರು: ‘ಹೈಕೋರ್ಟ್ ನ್ಯಾಯಮೂರ್ತಿಗಳ ಸ್ಥಾನಕ್ಕೆ ಶಿಫಾರಸು ಮಾಡಲಾಗುವ ಅಭ್ಯರ್ಥಿಗಳ ಜೊತೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ಕೊಲಿಜಿಯಂ ಪರಸ್ಪರ ಸಮಾಲೋಚನೆ ನಡೆಸುವ ಪದ್ಧತಿ ಕಡ್ಡಾಯವಾಗಬೇಕು’ ಎಂದು ನ್ಯಾಯಮೂರ್ತಿ ಎಚ್‌.ಜಿ.ರಮೇಶ್‌ ಅಭಿಪ್ರಾಯಪಟ್ಟಿದ್ದಾರೆ.

ನಾಲ್ಕು ತಿಂಗಳ ಅಲ್ಪಾವಧಿಗೆ ರಾಜ್ಯ ಹೈಕೋರ್ಟ್‌ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಆಗಿಯೂ ಕರ್ತವ್ಯ ನಿರ್ವಹಿಸಿರುವ ಎಚ್‌.ಜಿ.ರಮೇಶ್‌ ಮಂಗಳವಾರ (ಜ.15) ನಿವೃತ್ತಿಗೊಳ್ಳುತ್ತಿದ್ದು, ಸೋಮವಾರ ಹೈಕೋರ್ಟ್‌ನಲ್ಲಿ ರಾಜ್ಯ ವಕೀಲರ ಪರಿಷತ್‌ ಮತ್ತು ಬೆಂಗಳೂರು ವಕೀಲರ ಸಂಘದ ವತಿಯಿಂದ ನೀಡಲಾದ ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದರು.

ಶಿಫಾರಸುಗೊಂಡಿರುವ ಅಭ್ಯರ್ಥಿಗಳು ಆ ಹುದ್ದೆಗೆ ಸೂಕ್ತ ಹೌದೇ ಇಲ್ಲವೇ ಎಂಬುದು ತಿಳಿಯುತ್ತದೆ’ ಎಂದರು.

‘ಹಲವು ಹೈಕೋರ್ಟ್‌ ನ್ಯಾಯಮೂರ್ತಿಗಳ ನೇಮಕಕ್ಕೂ ಮುನ್ನ ಇತ್ತೀಚೆಗೆ ಸುಪ್ರೀಂಕೋರ್ಟ್ ಕೊಲಿಜಿಯಂ ಸಮಾಲೋಚನೆ ನಡೆಸಿದೆ. ಆದರೆ, ಕರ್ನಾಟಕ ಹೈಕೋರ್ಟ್‌ನಿಂದ ಕಳುಹಿಸಲಾಗಿದ್ದ ಅಭ್ಯರ್ಥಿಗಳ ಜೊತೆ ಸಮಾಲೋಚನೆ ನಡೆಸಿಲ್ಲ’ ಎಂದರು.

ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಾಹೇಶ್ವರಿ, ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ನಾಯಕ್ ಕೃಷ್ಣಪ್ಪ ಭೀಮಪ್ಪ, ಅಡ್ವೊಕೇಟ್‌ ಜನರಲ್‌ ಉದಯ ಹೊಳ್ಳ ಮಾತನಾಡಿದರು.

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್, ಪ್ರಧಾನ ಕಾರ‍್ಯದರ್ಶಿ ಎ.ಎನ್‌.ಗಂಗಾಧರಯ್ಯ , ಖಜಾಂಚಿ ಶಿವಮೂರ್ತಿ, ಹಿರಿ–ಕಿರಿಯ ವಕೀಲರು ಭಾಗವಹಿಸಿದ್ದರು.

**

ಪದೋನ್ನತಿ ನಿರಾಕರಿಸಿದ್ದರು

ಶಿವಮೊಗ್ಗ ಜಿಲ್ಲೆಯವರಾದ ರಮೇಶ್‌ 2003ರ ಮೇ 12ರಂದು ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಕಳೆದ ವರ್ಷ ಮುಖ್ಯ ನ್ಯಾಯಮೂರ್ತಿಯಾಗಿ ಬೇರೊಂದು ಹೈಕೋರ್ಟ್‌ಗೆ ವರ್ಗಾವಣೆ ಮಾಡಿದಾಗ ಅದನ್ನು, ತಮ್ಮದೇ ಆದ ಕಾರಣ ನೀಡಿ ನಿರಾಕರಿಸಿದ್ದರು.

**

ಎಚ್‌.ಜಿ.ರಮೇಶ್‌ ಶುದ್ಧ ಹಸ್ತ ಮತ್ತು ಶುದ್ಧ ಹೃದಯದಿಂದ ನ್ಯಾಯಾಂಗದ ಘನತೆ ಎತ್ತಿ ಹಿಡಿದವರು. ವ್ಯಕ್ತಿಗಿಂತ ಸಂಸ್ಥೆ ದೊಡ್ಡದು ಎಂಬುದನ್ನು ತೋರಿಸಿಕೊಟ್ಟವರು.
ಉದಯ ಹೊಳ್ಳ, ಅಡ್ವೊಕೇಟ್ ಜನರಲ್‌

**

ಹೈಕೋರ್ಟ್‌ ನ್ಯಾಯಮೂರ್ತಿಗಳ ಸಂಖ್ಯೆ 32ಕ್ಕೆ ಇಳಿಕೆ
ಒಟ್ಟು ಮಂಜೂರಾತಿ ಸಂಖ್ಯೆ 62

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !