ಕಲಾಗ್ರಾಮ ಅಗ್ನಿ ಆಕಸ್ಮಿಕ: ಸ್ಪಷ್ಟನೆ

7

ಕಲಾಗ್ರಾಮ ಅಗ್ನಿ ಆಕಸ್ಮಿಕ: ಸ್ಪಷ್ಟನೆ

Published:
Updated:

ಬೆಂಗಳೂರು: ‘ಮಲ್ಲತ್ತಹಳ್ಳಿಯ ಕಲಾಗ್ರಾಮ ಸಮುಚ್ಚಯ ಭವನದಲ್ಲಿ ನಡೆದ ಆಕಸ್ಮಿಕ ಅಗ್ನಿ ಅವಘಡದಲ್ಲಿ ಇಲಾಖೆಗೆ ಸಂಬಂಧಿಸಿದ ವ್ಯಕ್ತಿ
ಯೊಬ್ಬರು ನನ್ನ ವಿರುದ್ಧ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು’ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ರಿಜಿಸ್ಟ್ರಾರ್ ಈಶ್ವರ ಮಿರ್ಜಿ ತಿಳಿಸಿದ್ದಾರೆ.

‘ನಾನು ಕುವೆಂಪು ಭಾಷಾ ಭಾರತೀಯ ರಿಜಿಸ್ಟ್ರಾರ್ ಆಗಿದ್ದು, ನನ್ನ ಪ್ರಾಧಿಕಾರ ಅಧಿಕಾರ ವ್ಯಾಪ್ತಿಯಲ್ಲಿ ಕಲಾಗ್ರಾಮ ಬರುವುದಿಲ್ಲ. ಸದರಿ ರಂಗಮಂದಿರದ ನಿರ್ವಹಣೆ ರವೀಂದ್ರ ಕಲಾಕ್ಷೇತ್ರದ ನಿರ್ವಹಣೆಯಲ್ಲಿದೆ. ಅಲ್ಲಿಂದಲೇ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಂಡು ವೇತನ ಪಾವತಿಸಲಾಗುತ್ತಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಘಟನೆ ನಡೆದ ರಂಗಮಂದಿರದ ಮೇಲ್ಭಾಗದಲ್ಲಿ ರಾಷ್ಟ್ರೀಯ ನಾಟಕ ಶಾಲೆಯು ಅನಧಿಕೃತವಾಗಿ ತಾತ್ಕಾಲಿಕ ರಂಗಮಂದಿರವನ್ನು ಇಲಾಖೆಯ ಅಥವಾ ರವೀಂದ್ರ ಕಲಾಕ್ಷೇತ್ರ ಆಡಳಿತದ ಗಮನಕ್ಕೆ ತಾರದೇ ನಿರ್ಮಿಸಿಕೊಂಡಿದೆ. ಘಟನೆ ನಡೆದ ಸ್ಥಳದಿಂದ ವೈರ್‌ಗಳನ್ನು ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಸಕ್ಷಮ ಪ್ರಾದಿಕಾರದ ಅನುಮತಿ ಪಡೆಯದೇ ಎಳೆಯಲಾಗಿದ್ದು, ಈ ಕೆಲಸದಿಂದಾಗಿ ಆಗಿರುವ ತಾಂತ್ರಿಕ ವ್ಯತ್ಯಾಸಗಳಿಂದ ಅಗ್ನಿ ಅನಾಹುತಕ್ಕೆ ಕಾರಣವಾಗಿರುವ ಸಾಧ್ಯತೆ ಇದೆ’ ಎಂದು ಮಿರ್ಜಿ ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !