ಶುಕ್ರವಾರ, ನವೆಂಬರ್ 22, 2019
19 °C
ಹಿಂದಿನ ಸರ್ಕಾರಗಳ ಅವಧಿಯ ನೇಮಕ

ರಂಗಾಯಣಗಳ ನಿರ್ದೇಶಕರಿಗೂ ಕೊಕ್

Published:
Updated:

ಬೆಂಗಳೂರು: ವಿವಿಧ ಸಾಂಸ್ಕೃತಿಕ ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷರು ಹಾಗೂ ಸದಸ್ಯರ ನಾಮ ನಿರ್ದೇಶನಗಳನ್ನು ರದ್ದುಪಡಿಸಿದ್ದ  ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಇದೀಗ ರಂಗಾಯಣ ನಿರ್ದೇಶಕರು ಹಾಗೂ ರಂಗಸಮಾಜದ ಸಾರ್ವತ್ರಿಕ ಮಂಡಳಿ ಸದಸ್ಯರಿಗೂ ಕೊಕ್‌ ನೀಡಿದೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಹಾಗೂ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಅವಧಿಯಲ್ಲಿ ನೇಮಕಗೊಂಡಿದ್ದ ಸಾಂಸ್ಕೃತಿಕ ಸಂಸ್ಥೆಗಳ ಪ್ರಮುಖರ ಅವಧಿ ಮುಗಿಯುವ ಮುನ್ನವೇ, ಅವರ ಅಧಿಕಾರವನ್ನು ಮೊಟಕುಗೊಳಿಸಲಾಗಿತ್ತು.

ಭಾಗೀರಥಿ ಬಾಯಿ ಕದಂ (ಮೈಸೂರು), ಎ. ಗಣೇಶ್ ಸಾಗರ (ಶಿವಮೊಗ್ಗ), ಮಹೇಶ್ ವಿ. ಪಾಟೀಲ್ (ಕಲಬುರ್ಗಿ) ಹಾಗೂ ಪ್ರಮೋದ್ ಶಿಗ್ಗಾಂ (ಧಾರವಾಡ) ರಂಗಾಯಣದ ನಿರ್ದೇಶಕರಾಗಿದ್ದರು. ಅವರ ಬದಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಯನ್ನು ರಂಗಾಯಣಗಳ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.

ಶ್ರೀಪಾದ್ ಭಟ್ (ಉತ್ತರ ಕನ್ನಡ), ಗೋಪಾಲಕೃಷ್ಣ ನಾಯರಿ (ಉಡುಪಿ), ಮಲ್ಲಿಕಾರ್ಜುನ ಕಡಕೋಳ (ದಾವಣಗೆರೆ), ವಿಶ್ವೇಶ್ವರಿ ಹಿರೇಮಠ (ಬೆಳಗಾವಿ), ಸಹನಾ ಪಿಂಜಾರ್ (ಬಳ್ಳಾರಿ), ಎಲ್. ಕೃಷ್ಣಪ್ಪ (ಬೆಂಗಳೂರು) ಹಾಗೂ ಎಂ. ಚಂದ್ರಕಾಂತ್ ರಂಗಸಮಾಜದ ಸಾಂಸ್ಕೃತಿಕ ಮಂಡಳಿ ಸದಸ್ಯರಾಗಿದ್ದರು.

ಪ್ರತಿಕ್ರಿಯಿಸಿ (+)