ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಗದ ಕುಂಟೆಯಲ್ಲಿ ಪೂಜೆ

Last Updated 17 ಏಪ್ರಿಲ್ 2019, 18:33 IST
ಅಕ್ಷರ ಗಾತ್ರ

ಬೆಂಗಳೂರು:ಪಾರಂಪರಿಕ ‘ಬೆಂಗಳೂರು ಕರಗ ಶಕ್ತ್ಯೋತ್ಸವ’ದ ಏಳನೇ ದಿನವಾದ ಬುಧವಾರ ಕಬ್ಬನ್‌ ಉದ್ಯಾನದ ಕರಗದ ಕುಂಟೆಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ವೀರಕುಮಾರರ ಪಡೆಯೊಂದಿಗೆ ಮೆರವಣಿಯ‌ಲ್ಲಿ ಆಗಮಿಸಿದ ಕರಗದ ಪೂಜಾರಿ ಎನ್‌.ಮನು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ನೂರಾರು ಸಂಖ್ಯೆಯ ಭಕ್ತರು ದೈನ್ಯದಿಂದ ಕೈಮುಗಿದು ನಿಂತು ಪೂಜೆಯನ್ನು ಕಣ್ತುಂಬಿಕೊಂಡರು. ‌ಅಮ್ಮನವರ ಕುರಿತಾಗಿಜಯಘೋಷಗಳು ಮೊಳಗಿದವು.

ಕಬ್ಬನ್‌ ಉದ್ಯಾನದಲ್ಲಿ ಪೂಜೆ ಮುಗಿಸಿದ ಬಳಿಕ ಸಂಪಂಗಿಕೆರೆ ಅಂಗಳದ ಶಕ್ತಿ ಪೀಠಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು. ಅಲ್ಲಿಯು ಸಹ ನೂರಾರು ಸಂಖ್ಯೆಯ ಭಕ್ತರು ನೆರೆದಿದ್ದರು. ಅಲ್ಲಿಂದ ಧರ್ಮದರ್ಶಿ ಮನು ಅವರ ಮನೆಗೆ ತೆರಳಿ ಗೌರವ ಸ್ವೀಕರಿಸಲಾಯಿತು. ಬಿಬಿಎಂಪಿ ಕಚೇರಿ ಬಳಿ ಇರುವ ಕೋಟೆಯಲ್ಲಿಯಲ್ಲಿಯೂ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು.

ಕರಗ ಮಹೋತ್ಸವದ ಕೇಂದ್ರಬಿಂದು ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳು ನಡೆದವು,ಸಂಜೆ ಹೊಸ ವೀರಕುಮಾರರಿಗೆ ಗಂಟೆ ಪೂಜಾರಿಗಳು, ಅರ್ಚಕರು ದೀಕ್ಷೆ ನೀಡಿದರು.

ನಗರದಗಾಂಧಿನಗರ, ತಿಗಳರಪೇಟೆ, ಸಂಪಂಗಿರಾಮನಗರ ಹಾಗೂ ಇತರ ಭಾಗಗಳಲ್ಲಿ ಉಚಿತ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಹಸಿಕರಗ:ಕರಗ ಮಹೋತ್ಸವದ ಏಳನೇ ದಿನವಾದ ಬುಧವಾರಮಧ್ಯರಾತ್ರಿ ‘ಹಸಿಕರಗ’ ನಡೆಯಲಿದೆ. ನಸುಕಿನ 3 ಗಂಟೆಗೆಅರ್ಚಕ ಎನ್‌.ಮನು ಸಂಪಂಗಿಕೆರೆ ಅಂಗಳದ ಶಕ್ತಿ ಪೀಠದಲ್ಲಿಪೂಜಾ ಕೈಂಕರ್ಯಗಳನ್ನು ನೆರವೇರಿಸಲಿದ್ದಾರೆ.

ತಿಗಳ ಸಂಪ್ರದಾಯದಂತೆ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ,ದ್ರೌಪದಿ ದೇವಿಯನ್ನು ಆಹ್ವಾನ ಮಾಡಿಕೊಳ್ಳಲಿದ್ದಾರೆ. ಬಳಿಕಬಿಬಿಎಂಪಿ ಕೇಂದ್ರಕಚೇರಿ ಬಳಿಯ ಕೋಟೆಗೆ ಹಸಿಕರಗವನ್ನು ತರಲಾಗುತ್ತದೆ. ಅಲ್ಲಿ ಪೂಜೆ ನೆರವೇರಿಸಿದ ಬಳಿಕ ತಿಗಳರ ಪೇಟೆಯಲ್ಲಿರುವ ಧರ್ಮರಾಯಸ್ವಾಮಿ ದೇವಾಲಯಕ್ಕೆ ತರಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT