ನೀರ್ಚಾಲಿನಲ್ಲಿ ಕವಿಗೋಷ್ಠಿ ನಾಳೆ

7

ನೀರ್ಚಾಲಿನಲ್ಲಿ ಕವಿಗೋಷ್ಠಿ ನಾಳೆ

Published:
Updated:

ಬದಿಯಡ್ಕ: ಪೆರ್ಲದ ಕವಿ ಹೃದಯದ ಸವಿಮಿತ್ರರು ವೇದಿಕೆಯ ಆಶ್ರಯದಲ್ಲಿ ಆಯೋಜಿಸಿದ ಸರಣಿ ಕನ್ನಡ ಸಾಹಿತ್ತಿಕ ಕಾರ್ಯಕ್ರಮದ 4ನೇ ಸರಣಿ ಕವಿಗೋಷ್ಠಿಯು  ಇದೇ 8ರಂದು ಮಧ್ಯಾಹ್ನ 3ರಿಂದ ನೀರ್ಚಾಲು ಕುಮಾರ ಸ್ವಾಮಿ ಸಭಾಂಗಣದಲ್ಲಿ ನಡೆಯಲಿದೆ.

ಖ್ಯಾತ ಸಾಹಿತಿ ಬಾಲ ಮಧುರಕಾನನ ಅಧ್ಯಕ್ಷತೆ ವಹಿಸುವರು. ಸಾಹಿತಿ ಶ್ರೀಕೃಷ್ಣಯ್ಯ ಅನಂತಪುರ ಉದ್ಘಾಟಿಸುವರು.

ಕವಿಹೃದಯದ ಸವಿಮಿತ್ರರು ವೇದಿಕೆಯ ಸಂಚಾಲಕ ಮಣಿರಾಜ್ ವಾಂತಿಚ್ಚಾಲ್, ಹಿರಿಯ ಪತ್ರಕರ್ತ ರಾಧಾಕೃಷ್ಣ ಕೆ ಉಳಿಯತ್ತಡ್ಕ ಉಪಸ್ಥಿತರಿರುವರು. ಕವಿಗಳಾದ ಹರೀಶ್ ಪೆರ್ಲ, ಶಾರದಾ ಎಸ್. ಭಟ್ ಕಾಡಮನೆ, ಜ್ಯೋಸ್ನ್ಸಾ ಎಂ.ಕಡಂದೇಲು, ಚೇತನಾ ಕುಂಬಳೆ, ಪುಂಡೂರು ಪ್ರಭಾವತಿ ಕೆದಿಲಾಯ, ಚಿನ್ಮಯಕೃಷ್ಣ, ಚಿತ್ತರಂಜನ್ ಕಡಂದೇಲು, ಲತಾ ಆಚಾರ್ಯ ಬನಾರಿ, ಶ್ವೇತಾ ಕಜೆ, ದಯಾನಂದ ರೈ ಕಳ್ವಾಜೆ, ಶ್ಯಾಮಲಾ ರವಿರಾಜ್ ಕುಂಬಳೆ, ಸುಭಾಶ್ಚಂದ್ರ ಪೆರ್ಲ ಸಹಿತ ಜಿಲ್ಲೆಯ ಕವಿಗಳು ಸ್ವರಚಿತ ಕವಿತಾ ವಾಚನ ನಡೆಸುವರು.

ವಿಶೇಷ ಕವಿ-ಭಾವ ಸಂವಾದ ಏರ್ಪಡಿಸಲಾಗಿದೆ. ನಿರಂಜನ ಆಚಾರ್ಯ ನೀರ್ಚಾಲು ಕಾರ್ಯಕ್ರಮ ಸಂಯೋಜಿಸುವರು. ಮಾಹಿತಿ ಹಾಗೂ ಗೋಷ್ಠಿಯಲ್ಲಿ ಕವಿತಾ ವಾಚನ ನಡೆಸುವವರು 09946279505 ಸಂಖ್ಯೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಹಲೋ ಇಂಗ್ಲಿಷ್‌ ಯೋಜನೆ ಆರಂಭ

ಬದಿಯಡ್ಕ: ‘ವಿವಿಧ ಭಾಷೆಗಳ ತಿಳಿವಳಿಕೆಯು ನಮ್ಮ ಜ್ಞಾನ ವಿಸ್ತರಣೆಗೆ ದಾರಿಯಾಗುವುದು. ಆಂಗ್ಲ ಭಾಷಾ ಕಲಿಕೆಯ ಭಯದಿಂದ ವಿದ್ಯಾರ್ಥಿಗಳನ್ನು ಹೊರತರುವಲ್ಲಿ ಶಿಕ್ಷಕರು, ಪಾಲಕರು ಶಿಕ್ಷಣದ ಕ್ರಮವನ್ನು ಸುಲಭ ಮಾಡಿಕೊಳ್ಳಬೇಕು’ ಎಂದು ಮುಂಡಿತ್ತಡ್ಕ ಶಾಲಾ ವ್ಯವಸ್ಥಾಪಕ ಪಿ. ಜನಾರ್ದನ ಹೇಳಿದರು.

ಅವರು ಇಲ್ಲಿಗೆ ಸಮೀಪದ ಮುಂಡಿತ್ತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ‘ಹಲೋ ಇಂಗ್ಲೀಷ್’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ತಂತ್ರಜ್ಞಾನ ಯುಗದಲ್ಲಿ ವಿಷಯಗಳ ಕಲಿಕೆಯ ಸಾಕಷ್ಟು ಪೂರಕ ವ್ಯವಸ್ಥೆಗಳು ಲಭ್ಯವಿದ್ದು, ಸಮರ್ಪಕವಾಗಿ ಬಳಸುವಲ್ಲಿ ಆಸಕ್ತರಾಗಬೇಕು. ಆಂಗ್ಲ ಭಾಷಾ ಕಲಿಕೆಯ ಹಳೆಯ ಕ್ರಮಗಳಿಗೆ ಬದಲಾಗಿ ಹೊಸ ಅವಕಾಶಗಳಿಗೆ ತೆರೆದುಕೊಳ್ಳುವ ಅವಕಾಶವಿದ್ದು, ಇಂಗ್ಲೀಷ್‌ ಬಗ್ಗೆ ಭಯ ಅನಗತ್ಯ ಎಂದರು.

ಶಾಲಾ ಮುಖ್ಯ ಶಿಕ್ಷಕ ಕೆ ಗಣೇಶ್ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಎಣ್ಮಕಜೆ ಗ್ರಾಮ ಪಂಚಾಯಿತಿ ಸದಸ್ಯ ಅಬೂಬಕರ್ ಸಿದ್ದೀಕ್, ಶಾಲಾ ಮಾತೃಮಂಡಳಿ ಅಧ್ಯಕ್ಷೆ ಎಂ ರೇವತಿ, ಶಾಲಾ ನೌಕರ ಸಂಘದ ಕಾರ್ಯದರ್ಶಿ ಎ ಪದ್ಮನಾಭ ನಾಯಕ್, ದಿವ್ಯಜ್ಯೋತಿ , ನಂದನ ಆರ್ ಎಂ . ಶಿಕ್ಷಕ ಎಂ ದಾಮೋದರನ್   ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !