ಮಹಿಳೆಯರ ಪಾಲ್ಗೊಳ್ಳುವಿಕೆ ಇನ್ನಷ್ಟು ಬೇಕು: ಕವಿತಾ

7

ಮಹಿಳೆಯರ ಪಾಲ್ಗೊಳ್ಳುವಿಕೆ ಇನ್ನಷ್ಟು ಬೇಕು: ಕವಿತಾ

Published:
Updated:
Deccan Herald

ಬೆಂಗಳೂರು: ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಕಲಾ ನಿರ್ದೇಶನ, ಸಂಕಲನ, ವಸ್ತ್ರ ವಿನ್ಯಾಸದಂತಹ ವಿಭಾಗಗಳಿಗೆ ಮಹಿಳೆಯರ ಪ್ರವೇಶ ಆಗಬೇಕು ಎಂದು ನಿರ್ದೇಶಕಿ ಕವಿತಾ ಲಂಕೇಶ್ ಹೇಳಿದರು.

ಬೆಂಗಳೂರಿನಲ್ಲಿ ಶನಿವಾರ ನಡೆದ ಕಿರುಚಿತ್ರಗಳ ಉತ್ಸವ ‘ಕನ್ನಡತಿ ಉತ್ಸವ – 2018’ರ ಉದ್ಘಾಟನಾ ಕಾರ್ಯಕ್ರಮದ ನಂತರ ‘ಪ್ರಜಾವಾಣಿ’ ಜೊತೆ ಅವರು ಮಾತನಾಡಿದರು.

‘ಈ ಕ್ಷೇತ್ರಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯ ಅಗತ್ಯ ಇದೆ. ಅಲ್ಲೆಲ್ಲ ಮಹಿಳೆಯರ ದೃಷ್ಟಿಕೋನ ಇನ್ನಷ್ಟು ಬೇಕು. ಹಾಗೆಯೇ, ಹೆಣ್ಣುಮಕ್ಕಳ ದೃಷ್ಟಿಕೋನವನ್ನು ಗ್ರಹಿಸುವ ಶಕ್ತಿ ನಿರ್ಮಾಪಕರಿಗೆ ಇನ್ನಷ್ಟು ಬರಬೇಕು’ ಎಂದರು.

‘ಮಹಿಳೆಯೊಬ್ಬಳು ಸಿನಿಮಾ ನಿರ್ದೇಶನ ಮಾಡುತ್ತಾಳೆ ಎಂದ ತಕ್ಷಣ, ಸಿನಿಮಾ ನಿರ್ಮಾಣಕ್ಕೆ ಹಿಂದೆ–ಮುಂದೆ ನೋಡುವ ಸ್ಥಿತಿ ಕೂಡ ಇದೆ. ಇದು ಬದಲಾಗಬೇಕು. ನಾವು ಕೂಡ ನಮ್ಮ ಶಕ್ತಿಯನ್ನು ಸಾಬೀತು ಮಾಡಬೇಕು. ನಾವು ನಿರ್ದೇಶಿಸುವ ಸಿನಿಮಾ ಕೋಟಿಗಳ ಲೆಕ್ಕದಲ್ಲಿ ಹಣ ಗಳಿಸದಿದ್ದರೂ, ಬಂಡವಾಳದ ರೂಪದಲ್ಲಿ ಹಾಕಿದ ದುಡ್ಡನ್ನು ಗಳಿಸಿಕೊಡುವ ಶಕ್ತಿ ಇರಬೇಕು’ ಎಂದು ಹೇಳಿದರು.

‘ಅವಳ ಹೆಜ್ಜೆ’ ಸಂಸ್ಥೆ ಈ ಕಾರ್ಯಕ್ರಮ ಆಯೋಜಿಸಿತ್ತು. ‘ದರೋಜಿ’ (ನಿರ್ದೇಶನ: ಸುಗಂಧಿ ಗದಾಧರ), ‘ಅಪ್ರಾಪ್ತ’ (ನಿ: ಕ್ಷೇಮಾ ಬಿ.ಕೆ.), ‘ಜೀವನ ರೇಖೆ’ (ನಿ: ಸವಿತಾ ಇನಾಂದಾರ್), ‘ಕಾಜಿ’ (ನಿ: ಐಶನಿ ಶೆಟ್ಟಿ), ‘ದಾಳಿ’ (ನಿ: ಮೇದಿನಿ ಕೆಳಮನೆ), ‘ಅನಲ’ (ನಿ: ವಿ.ಕೆ. ಸಂಜ್ಯೋತಿ) ಮತ್ತು ‘ಬೆಳ್ಳಿ ತಂಬಿಗೆ’ ಕಿರುಚಿತ್ರಗಳನ್ನು ಪ್ರದರ್ಶಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !