‘ಅಂಗಾಂಗ ದಾನಕ್ಕೆ ವಿದ್ಯಾವಂತರಿಗೆ ಹಿಂಜರಿಕೆ’

7

‘ಅಂಗಾಂಗ ದಾನಕ್ಕೆ ವಿದ್ಯಾವಂತರಿಗೆ ಹಿಂಜರಿಕೆ’

Published:
Updated:

ಬೆಂಗಳೂರು: ‘ಅಂಗಾಂಗ ದಾನ ಪ್ರಕ್ರಿಯೆಗೆ ವಿದ್ಯಾವಂತರಿಂದ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತಿಲ್ಲ’ ಎಂದು ರಿಬರ್ತ್ ಫೌಂಡೇಷನ್ ಸದಸ್ಯ ಪ್ರಮೋದ್ ಲಕ್ಷ್ಮಣ್ ಮಹಾಜನ್ ಬೇಸರ ವ್ಯಕ್ತಪಡಿಸಿದರು.

83 ದಿನಗಳಿಂದ ದೇಶದ 18 ರಾಜ್ಯಗಳ ಪ್ರಮುಖ ಸ್ಥಳಗಳಲ್ಲಿ ಬೈಕ್ ಯಾತ್ರೆ ನಡೆಸುವ ಮೂಲಕ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಅವರು ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಗೆ ಭೇಟಿ ನೀಡಿ ಅವರು ಮಾತನಾಡಿದರು.

‘ದೇಶದಲ್ಲಿ ಇಂದಿಗೂ ಅಂಗಾಂಗ ದಾನದ ಬಗ್ಗೆ ಸಾಂಸ್ಕೃತಿಕ ಹಾಗೂ ವೈಚಾರಿಕ ನೆಲೆಗಟ್ಟಿನಲ್ಲಿ ಹಲವು ಗೊಂದಲಗಳಿವೆ. ಅಂಗಾಂಗ ದಾನದ ಪ್ರಾಮುಖ್ಯತೆಯನ್ನು ಸಮಾಜಕ್ಕೆ ತಿಳಿಹೇಳುವ ಅಗತ್ಯವಿದೆ. ವಿದ್ಯಾವಂತರು ಈ ತನಕ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸದಿರುವುದು ದುರ್ದೈವ’ ಎಂದರು. 

‘ಬಿಜಿಎಸ್ ಆಸ್ಪತ್ರೆ ಅಂಗಾಂಗ ದಾನದ ಬಗ್ಗೆ ಅರಿವು ಮೂಡಿಸಲು ‘ಜೀವ ಸಾರ್ಥಕತೆ’ ಎಂಬ ಅಭಿಯಾನ ಆರಂಭಿಸಿದೆ. ಈ ಮೂಲಕ ಅಂಗಾಂಗ ಸಮಸ್ಯೆಯಿಂದ ಬಳಲುತ್ತಿರುವವರಿಗೆ ನೆರವಾಗಲಿದೆ’ ಎಂದು ಸಂಚಾಲಕ ಡಾ.ಕಿಶೋರ್ ಫಡ್ಕೆ ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !