ಮೂರು ಭಾಷೆಗಳಲ್ಲಿ ರಾಜ್ಯದ ನಕ್ಷೆ

7

ಮೂರು ಭಾಷೆಗಳಲ್ಲಿ ರಾಜ್ಯದ ನಕ್ಷೆ

Published:
Updated:

ಬೆಂಗಳೂರು: ಭಾರತೀಯ ಸರ್ವೇಕ್ಷಣಾ ಇಲಾಖೆಯ ರಾಜ್ಯ ಘಟಕವಾದ ಕರ್ನಾಟಕ ಜಿಯೋಸ್ಪೇಷಿಯಲ್‌ ಡೇಟಾ ಸೆಂಟರ್‌ (ಕೆಜಿಡಿಸಿ) ಮೂರು ಭಾಷೆಗಳಲ್ಲಿ ರಾಜ್ಯದ ನಕ್ಷೆಯನ್ನು ಸಿದ್ಧಪಡಿಸಿದೆ.

ಇಲಾಖೆಯ ಮಹಾ ಸರ್ವೇಕ್ಷಣಾಧಿಕಾರಿ ಲೆಫ್ಟಿನೆಂಟ್ ಜನರಲ್‌ ಗಿರೀಶ್ ಕುಮಾರ್‌ ಅವರು ಶನಿವಾರ ಇಲ್ಲಿ ಅದನ್ನು ಬಿಡುಗಡೆ ಮಾಡಿದರು. 

ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ನಕ್ಷೆ ಲಭ್ಯವಿತ್ತು. ಈಗ ಹಿಂದಿಯಲ್ಲೂ ಲಭ್ಯ.

ಕೆಜಿಡಿಸಿ ನಿರ್ದೇಶಕ ಡಾ. ಎಮ್‌. ಸ್ಟಾಲಿನ್‌, ‘ಪ್ರವಾಸಿಗರಿಗೆ ಅನುಕೂಲವಾಗುವಂತೆ ಸ್ಥಳಗಳ ಮಾಹಿತಿ ಹಾಗೂ ಅವುಗಳ ಐತಿಹಾಸಿಕ ಮಹತ್ವವನ್ನು ಇದರಲ್ಲಿ ವಿವರಿಸಲಾಗಿದೆ. ರಾಜ್ಯದ ರಸ್ತೆ, ರೈಲ್ವೆ ಸಂಪರ್ಕ, ಜಲಮೂಲಗಳು, ಕಾಡುಗಳು ಹಾಗೂ ಅಧಿಕೃತ ಗಡಿಯನ್ನು ಇದರಲ್ಲಿ ಗುರುತಿಸಲಾಗಿದೆ’ ಎಂದರು. ಕೆಎಸ್‌ಆರ್‌ಎಸ್‌ಎಸಿ ನಿರ್ದೇಶಕ ಡಾ.ಕೆ.ಪ್ರಭುರಾಜ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !