ಶನಿವಾರ, ಡಿಸೆಂಬರ್ 7, 2019
21 °C

‘ಕಿದ್ವಾಯಿ ಆಸ್ಪತ್ರೆ ಮತ್ತಷ್ಟು ಮೇಲ್ದರ್ಜೆಗೆ’

ಪ್ರಜಾವಾಣಿ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ‘ಬಡರೋಗಿಗಳಿಗೆ ಉಚಿತ ಗುಣಮಟ್ಟದ ವೈದ್ಯಕೀಯ ಸೇವೆ ನೀಡುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಖಾಸಗಿ ಸಂಘ-ಸಂಸ್ಥೆಗಳ ನೆರವಿನೊಂದಿಗೆ ಆಸ್ಪತ್ರೆಯನ್ನು ಮತ್ತಷ್ಟು ಮೇಲ್ದರ್ಜೆಗೆ ಏರಿಸಲಾಗುವುದು’ ಎಂದು ಕಿದ್ವಾಯಿ ಸ್ಮಾರಕ ಗ್ರಂಥಿ ನಿರ್ದೇಶಕ ಡಾ.ಸಿ.ರಾಮಚಂದ್ರ ತಿಳಿಸಿದರು. 

ಕಿದ್ವಾಯಿ ಆಸ್ಪತ್ರೆ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಇನ್ಫೊಸಿಸ್‌ ಫೌಂಡೇಷನ್ ನಿರ್ಮಿಸಿರುವ ಧರ್ಮಶಾಲಾ ಕಟ್ಟಡದ ನವೀಕರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಿಬ್ಬಂದಿಗೆ ವಾಹನ ವ್ಯವಸ್ಥೆಯಿಲ್ಲ. ಹೀಗಾಗಿ ವಾಹನ ವ್ಯವಸ್ಥೆ ಹಾಗೂ ಇ-ಆಸ್ಪತ್ರೆ ಸೇವೆ ಆರಂಭಿಸಲು ನೆರವು ನೀಡಬೇಕು’ ಎಂದು ಕೇಳಿಕೊಂಡರು.

‘ಆಸ್ಪತ್ರೆಯನ್ನು ದೇಶದಲ್ಲಿಯೇ ನಂ.1 ಸ್ಥಾನಕ್ಕೇರಿಸುವ ಗುರಿ ಇದೆ. ₹50 ಕೋಟಿ ವೆಚ್ಚದಲ್ಲಿ 6 ಅಂತಸ್ತಿನ ಸುಸಜ್ಜಿತ ಒಪಿಡಿ ಬ್ಲಾಕ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಮುಂಬರುವ ಜೂನ್‌ನಲ್ಲಿ ಸೇವೆ ಆರಂಭವಾಗಲಿದೆ’ ಎಂದರು. 

‘2001ರಲ್ಲಿ ₹3 ಕೋಟಿ ವೆಚ್ಚದಲ್ಲಿ ಕಟ್ಟಿದ ಧರ್ಮಶಾಲಾ ಕಟ್ಟಡವನ್ನು ಇದೀಗ ₹1 ಕೋಟಿ ವೆಚ್ಚದಲ್ಲಿ ನವೀಕರಿಸಲಾಗಿದೆ. ಕಲಬುರ್ಗಿಯಲ್ಲಿಯೂ ಧರ್ಮಶಾಲಾ ಕಟ್ಟಡ ನಿರ್ಮಿಸಿದ್ದೇವೆ’ ಎಂದು ಪ್ರತಿಷ್ಠಾನದ ಕಾರ್ಯಕಾರಿ ಉಪಾಧ್ಯಕ್ಷ ವಿನೋದ್ ಹಂಪಾಪುರ ತಿಳಿಸಿದರು.  

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು