ಪ್ರವಾಹ ಸಂತ್ರಸ್ತರಿಗೆ ನೆರವು: ಶ್ಲಾಘನೆ

7

ಪ್ರವಾಹ ಸಂತ್ರಸ್ತರಿಗೆ ನೆರವು: ಶ್ಲಾಘನೆ

Published:
Updated:
Deccan Herald

ಬೆಂಗಳೂರು: 'ನೃತ್ಯ ಹಾಗೂ ಫ್ಯಾಷನ್ ಪ್ರದರ್ಶನ, ಆಹಾರವನ್ನು ಮಾರಾಟದ ಮೂಲಕ ಹಣವನ್ನು ಕೇರಳ ಹಾಗೂ ಕೊಡಗಿನ ಪ್ರವಾಹ ಪೀಡಿತರಿಗೆ ನೀಡುತ್ತಿರುವುದು ಪ್ರಶಂಸನೀಯ' ಎಂದು ಪ್ರಾಂಶುಪಾಲ ರೆ.ಫಾ. ಡಾ.ಸಾಬುಜಾರ್ಜರ್‌ ಹೇಳಿದರು.

ಪೀಣ್ಯದಾಸರಹಳ್ಳಿ ಸಮೀಪ ಜಾಲಹಳ್ಳಿಯ ಸೇಂಟ್ ಕ್ಲಾರೆಟ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ 'ರೆಸಿಪ್ರೊ 2018-19' ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ನಟ ಅಮಿತ್‌ ರಾವ್‌ ಮಾತನಾಡಿ, 'ವಿದ್ಯಾರ್ಥಿಗಳು ಕಲೆ, ಪ್ರತಿಭೆಯೊಂದಿಗೆ ಸೇವಾ ಮನೋಭಾವ ರೂಢಿಸಿಕೊಂಡು ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಬೇಕಾಗಿದೆ' ಎಂದರು.

ಉಪಪ್ರಾಂಶುಪಾಲ ರೆ.ಫಾ. ಡಾ.ವಿನೀತ ಜಾರ್ಜರ್‌, ಸಂಸ್ಥೆಯ ವ್ಯವಸ್ಥಾಪಕ ಫಾ.ಬೆನ್ನಿಮ್ಯಾಥ್ಯೂ, ಆಡಳಿತಾಧಿಕಾರಿ, ಜೋಸೆಫ್ ಮ್ಯಾಥ್ಯೂ, ವಿಭಾಗಗಳ ಮುಖ್ಯಸ್ಥ ಮಾದೇಶ್ ಎನ್., ಜಯಲಕ್ಷ್ಮೀ ಆರ್, ಸೀಮಾ ಜೋಸೆಫ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !