ಕೋದಂಡರಾಮಸ್ವಾಮಿ ರಥೋತ್ಸವ ಸಂಭ್ರಮ

ಶುಕ್ರವಾರ, ಏಪ್ರಿಲ್ 26, 2019
24 °C

ಕೋದಂಡರಾಮಸ್ವಾಮಿ ರಥೋತ್ಸವ ಸಂಭ್ರಮ

Published:
Updated:
Prajavani

ಯಲಹಂಕ: ಬಳ್ಳಾರಿ ರಸ್ತೆಯ ಬ್ಯಾಟರಾಯನಪುರದಲ್ಲಿ ಕೋದಂಡರಾಮಸ್ವಾಮಿಯ 71ನೇ ವರ್ಷದ ಬ್ರಹ್ಮರಥೋತ್ಸವ ಭಾನುವಾರ ವಿಜೃಂಭಣೆಯಿಂದ ನಡೆಯಿತು. 

ಬೆಳಿಗ್ಗೆಯಿಂದಲೇ ಸ್ವಾಮಿಗೆ ಅಭಿಷೇಕ, ಅರ್ಚನೆ, ಮಹಾನಿವೇದನೆ, ಮಹಾಮಂಗಳಾರತಿಯ ಪೂಜಾಕೈಂಕರ್ಯಗಳನ್ನು ನೆರವೇರಿಸಲಾಯಿತು. ಭಕ್ತರ ಜಯಘೋಷಗಳೊಂದಿಗೆ ಮಧ್ಯಾಹ್ನ 1.30ಕ್ಕೆ ರಥವನ್ನು ಎಳೆಯಲಾಯಿತು. ಸುತ್ತಮುತ್ತಲ ಗ್ರಾಮಗಳು, ಬೆಂಗಳೂರು ನಗರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು, ಸ್ವಾಮಿಯ ದರ್ಶನ ಪಡೆದರು. ಬಾಳೆಹಣ್ಣು ಮತ್ತು ದವನದ ಸೊಪ್ಪನ್ನು ರಥದ ಮೇಲೆ ಎಸೆಯುವ ಮೂಲಕ ತಮ್ಮ ಹರಕೆ ತೀರಿಸಿದರು.

ದೇವಾಲಯದ ಸುತ್ತಮುತ್ತ ಪಾನಕ, ಮಜ್ಜಿಗೆ ಮತ್ತು ಕೋಸಂಬರಿ ವಿತರಣೆಯ ಜೊತೆಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !