ಕೆಪಿಟಿಸಿಎಲ್‌ನಲ್ಲಿ ’ವನಸುಮದ ಬದುಕು’

ಶುಕ್ರವಾರ, ಏಪ್ರಿಲ್ 26, 2019
24 °C

ಕೆಪಿಟಿಸಿಎಲ್‌ನಲ್ಲಿ ’ವನಸುಮದ ಬದುಕು’

Published:
Updated:

ಬೆಂಗಳೂರು: ಕೆಪಿಟಿಸಿಎಲ್‌ ಲೆಕ್ಕಾಧಿಕಾರಿಗಳ ಸಂಘದ ವತಿಯಿಂದ ಶನಿವಾರ ಏರ್ಪಡಿಸಿದ್ದ ’ವನಸುಮದ ಬದುಕು’ ಕಾರ್ಯಕ್ರಮ ಸಾಹಿತ್ಯ ಹಾಗೂ ಸಂಗೀತದ ರಸದೌತಣ ಉಣಬಡಿಸಿತು.

ನಗರದ ಬೆಳ್ಳಿಭವನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಗಾಯಕ ಗರ್ತಿಕೆರೆ ರಾಘಣ್ಣ ಹಾಡುಗಳ ಮೂಲಕ ರಂಜಿಸಿದರು. ವೈದ್ಯೆ ಕಲ್ಯಾಣಿ ಕರ್ಕೆರೆ ಅವರು ನರದೌರ್ಬಲ್ಯ ಪರಿಹಾರದ ಬಗ್ಗೆ ಆರೋಗ್ಯ ಜಾಗೃತಿ ಮೂಡಿಸಿದರು.

ವಿಶ್ವ ಹಿಂದೂ ಪರಿಷತ್‌ನ ರಾಜ್ಯ ಉಪಾಧ್ಯಕ್ಷ ಟಿ.ಎ.ಪಿ.ಶೆಣೈ ಅವರು ರಾಮನವಮಿ ಪ್ರಯುಕ್ತ ’ಮರ್ಯಾದಾ ಪುರುಷೋತ್ತಮ ರಾಮಚಂದ್ರ‘ ಕುರಿತು ಪ್ರವಚನ ನೀಡಿದರು.

ಕೆಪಿಟಿಸಿಎಲ್‌ ಸಂಘದ ವಾಸುದೇವ ಕಾರಂತ, ಮಾಜಿ ಅಧ್ಯಕ್ಷ ವಿ.ಜಿ.ಪಂಡಿತ್, ಕವಯತ್ರಿ ಕೊಪ್ಪರಂ ಅನ್ನಪೂರ್ಣ, ಅನುವಾದಕಿ ಪೂರ್ಣಿಮಾ ಗೋಪಾಲ್‌ ಅವರು ಉಪಸ್ಥಿತರಿದ್ದರು. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !