ಅಸಭ್ಯ ವರ್ತನೆ: ಬಂಧನ

7

ಅಸಭ್ಯ ವರ್ತನೆ: ಬಂಧನ

Published:
Updated:

ಬೆಂಗಳೂರು: ಮಹಿಳೆ ಎದುರು ಪ್ಯಾಂಟಿನ ಜಿಪ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ ಆರೋಪದಡಿ ಕೃಪಾರಾಮ್ (35) ಎಂಬಾತನನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಆರೋಪಿ, ಎರಡು ತಿಂಗಳಿನಿಂದ ಬಾಗಲಗುಂಟೆಯ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಗ್ರಾನೈಟ್ ಅಳವಡಿಸುವ ಕೆಲಸ ಮಾಡುತ್ತಿದ್ದ. ಈತನ ವಿರುದ್ಧ 28 ವರ್ಷದ ಮಹಿಳೆ ಶುಕ್ರವಾರ ದೂರು ಕೊಟ್ಟಿದ್ದರು.

‘ನಮ್ಮ ಮನೆ ಪಕ್ಕದ ಕಟ್ಟಡದಲ್ಲಿ ಕೆಲಸ ಮಾಡುವ ವ್ಯಕ್ತಿ ನನ್ನನ್ನು ಕೆಟ್ಟ ದೃಷ್ಟಿಯಿಂದ ದಿಟ್ಟಿಸಿ ನೋಡುತ್ತಾನೆ. ಹೊರಗೆ ಹೊರಟಾಗ ಅಡ್ಡ ಬಂದು ನಿಲ್ಲುತ್ತಾನೆ. ಅಶ್ಲೀಲ ಸಂಜ್ಞೆ ಮಾಡಿ ಗುಡಿಸಲಿಗೆ ಕರೆಯುತ್ತಾನೆ. ಹಲವು ಬಾರಿ ಎಚ್ಚರಿಕೆ ಕೊಟ್ಟರೂ ಬುದ್ಧಿ ಕಲಿತಿಲ್ಲ’ ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ.

‘ಶುಕ್ರವಾರ ಬೆಳಿಗ್ಗೆ 8.30ರ ಸುಮಾರಿಗೆ ನಾನು ಮನೆ ಮುಂದೆ ಕಸ ಗುಡಿಸುತ್ತಿದ್ದಾಗ ಶೆಡ್‌ನಿಂದ ಆಚೆ ಬಂದ ಆತ, ಪ್ಯಾಂಟ್ ಜಿಪ್ ಬಿಚ್ಚಿಕೊಂಡು ಅಶ್ಲೀಲ ಸಂಜ್ಞೆ ಮಾಡಿದ. ಕೂಡಲೇ ಪತಿಗೆ ಹೇಳಿದೆ. ನಂತರ ಕಟ್ಟಡದ ಮಾಲೀಕರಿಗೆ ವಿಷಯ ತಿಳಿಸಿ, ಅವರ ಸೂಚನೆಯಂತೆ ಠಾಣೆ ಮೆಟ್ಟಿಲೇರಿದ್ದೇವೆ. ಆರೋಪಿ ವಿರುದ್ಧ ಕ್ರಮ ಜರುಗಿಸಿ’ ಎಂದು ಮನವಿ ಮಾಡಿದ್ದಾರೆ.

ದಂಪತಿ ಜಗಳ ಮಾಡಿದ ಬಳಿಕ ಶೆಡ್ ತೊರೆದಿದ್ದ ಕೃಪಾರಾಮ್‌ನನ್ನು ಶುಕ್ರವಾರ ರಾತ್ರಿ ಪಕ್ಕದ ರಸ್ತೆಯಲ್ಲಿ ವಶಕ್ಕೆ ಪಡೆಯಲಾಯಿತು. ನ್ಯಾಯಾಧೀಶರು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು ಎಂದು ಬಾಗಲಗುಂಟೆ ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !