ಶುಕ್ರವಾರ, ಡಿಸೆಂಬರ್ 13, 2019
20 °C

ರಾಜಧಾನಿ ತಲುಪಿದ ಸೈಕಲ್ ಜಾಥಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ‘ಮಹಿಳಾ ಸಬಲೀಕರಣ’ ಧ್ಯೇಯದೊಂದಿಗೆ ಬೆಳಗಾವಿಯಿಂದ ಹೊರಟಿದ್ದ ರಾಜ್ಯ ಪೊಲೀಸ್ ಮೀಸಲು ಪಡೆಯ (ಕೆಎಸ್‌ಆರ್‌ಪಿ) ಮಹಿಳಾ ಸಿಬ್ಬಂದಿಯ ‘ಸೈಕಲ್ ಜಾಥಾ’ ಭಾನುವಾರ ಬೆಂಗಳೂರಿನಲ್ಲಿ ಮುಕ್ತಾಯಗೊಂಡಿತು.

ಬಾಲ್ಯ ವಿವಾಹಕ್ಕೆ ತಡೆ, ಹೆಣ್ಣು ಮಕ್ಕಳಿಗೆ ಶಿಕ್ಷಣ, ಭ್ರೂಣ ಹತ್ಯೆಗೆ ವಿರೋಧ, ಶುಚಿತ್ವ ಹಾಗೂ ವರದಕ್ಷಿಣೆ ಮುಕ್ತ ಸಮಾಜ ನಿರ್ಮಾಣದ ಉದ್ದೇಶದಿಂದ ಎಡಿಜಿಪಿ ಭಾಸ್ಕರ್‌ರಾವ್‌ ನೇತೃತ್ವದಲ್ಲಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಬೆಳಗಾವಿಯಿಂದ ಬುಧವಾರ
(ಡಿ. 5ರಂದು) ಹೊರಟಿದ್ದ ಜಾಥಾ ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಚಿತ್ರದುರ್ಗ ಹಾಗೂ ತುಮಕೂರು ಮಾರ್ಗವಾಗಿ
545 ಕಿ.ಮೀ ಸಂಚರಿಸಿತು. 

ಭಾನುವಾರ ಮಧ್ಯಾಹ್ನ ವಿಧಾನಸೌಧಕ್ಕೆ ಬಂದ 95 ಮಹಿಳಾ ಸಿಬ್ಬಂದಿಯ ತಂಡವನ್ನು ಐಪಿಎಸ್ ಅಧಿಕಾರಿಗಳಾದ ಎ.ಎಂ.ಪ್ರಸಾದ್, ಮಾಲಿನಿ ಕೃಷ್ಣಮೂರ್ತಿ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿಬಾಯಿ, ಮೇಯರ್ ಗಂಗಾಂಬಿಕೆ ಸ್ವಾಗತಿಸಿದರು.

ಪ್ರತಿಕ್ರಿಯಿಸಿ (+)